ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಸೈನೈಡ್ ಸೇವಿಸಿ ಆತ್ಮಹತ್ಯೆ

ಕೋಲಾರ, ಡಿ.18: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಟೀಚರ್ಸ್ ಕಾಲನಿಯಲ್ಲಿಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಬಂಗಾರಪೇಟೆ ಮೂಲದ ಪ್ರಮೀಳ (48), ರಾಮು (55) ಆತ್ಮ ಹತ್ಯೆ ಮಾಡಿಕೊಂಡ ದಂಪತಿ.
ಡಯಾಬಿಟೀಸ್ ಖಾಯಿಲೆಯಿಂದ ನರಳುತ್ತಿದ್ದ ಪ್ರಮೀಳ ಅವರ ಒಂದು ಕಾಲನ್ನು ತೆಗೆದಿದ್ದ ವೈದ್ಯರು ಡಯಾಲಿಸೀಸ್ ಮಾಡುವಂತೆ ತಿಳಸಿದ್ದರು. ಅಲ್ಲದೇ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ಸೈನೈಡ್ ಸೇವಿಸಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಳಬಾಗಿಲು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
Next Story





