ಕವಿತಾ ಟ್ರಸ್ಟಿನ ಸ್ಪರ್ಧೆಯಲ್ಲಿ ಗೋವೆಯ ಸನಿಕಾ ಪವಾರ್ ಪ್ರಥಮ

ಮಂಗಳೂರು, ಡಿ.18: ಕೊಂಕಣಿ ಕವಿತೆಯ ಸಮಗ್ರ ಬೆಳವಣಿಗೆಗೆ ದುಡಿಯುವ ಕವಿತಾ ಟ್ರಸ್ಟ್ ಆಯೋಜಿಸಿದ ದಿ.ಚಾರ್ಲ್ಸ್ ಮತ್ತು ತೆರೆಝಾ ರೊಡ್ರಿಗಸ್ ಸ್ಮಾರಕ ಹದಿಮೂರನೇ ಅಖಿಲ ಭಾರತ ಕೊಂಕಣಿ ಕವಿತೆ ಬರೆಯುವ ಸ್ಪರ್ಧೆಯಲ್ಲಿ ಗೋವೆಯ ವಿದ್ಯಾರ್ಥಿನಿಗಳು ವಿಜೇತರಾಗಿದ್ದಾರೆ.
ಗೋವೆಯ ಸರ್ವೋದಯ ಎಜುಕೇಶನಲ್ ಸೊಸೈಟೀಸ್ ಹೈಸ್ಕೂಲಿನ 10ನೇ ತರಗತಿಯ ವಿದ್ಯಾರ್ಥಿನಿ ಸನಿಕಾ ಪವಾರ್ ಬರೆದ ‘ರೊಬೊಟಿಕ್ ಮಮ್ಮಾ’ (ರೊಬೋಟಿಕ್ ತಾಯಿ) ಕವಿತೆಗೆ ಪ್ರಥಮ ಬಹುಮಾನ ದೊರಕಿದೆ.
ಗೋವೆಯ ಮಂಗೇಶಿಯ 10ನೆನೇ ತರಗತಿಯ ಅನಿಶಾ ಗಾವ್ಡೆಗೆ ದ್ವಿತೀಯ ಮತ್ತು ಗೋವೆಯ ಮಾಂದ್ರೆಯ 10ನೇ ತರಗತಿಯ ದೀಕ್ಷಾ ಶೆತ್‌ಮಾಂದ್ರೆಕಾರ್ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಜ.11 ಮತ್ತು 12ರಂದು ಗೋವೆಯ ಮಡ್ಗಾಂವ್ ನಗರದ ರವೀಂದ್ರ ಭವನದಲ್ಲಿ ಜರುಗುವ ಕವಿತಾ ಫೆಸ್ತ್-2020ರಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





