ಡಿ.21ರಂದು ಗಿರಿಗಿಟ್ ವಿಜಯೋತ್ಸವ
ಮಂಗಳೂರು,ಡಿ.19: ಶತದಿನ ಪೂರೈಸಿದ ‘ಗಿರಿಗಿಟ್’ ತುಳು ಸಿನೆಮಾದ ಸಂಭ್ರಮಾಚರಣೆ ಕಾರ್ಯಕ್ರಮ ಡಿ.21ರಂದು ಸಂಜೆ 5ರಿಂದ ನಗರದ ಕದ್ರಿ ಮೈದಾನದಲ್ಲಿ ನಡೆಯಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರದ ನಾಯಕ ರೂಪೇಶ್ ಶೆಟ್ಟಿ, ರಾಜ್ಯದ ಖ್ಯಾತ ಗಾಯಕರಿಂದ ಸಂಗೀತ ಸಂಜೆ, ನೃತ್ಯ ಕಾರ್ಯಕ್ರಮ, ಮ್ಯಾಜಿಕ್ ಶೋ ಹಾಗೂ ಗಿರಿಗಿಟ್ ಚಿತ್ರತಂಡದಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
15 ದೇಶ, 6 ರಾಜ್ಯ ಸೇರಿದಂತೆ ವಿವಿಧೆಡೆ ಗಿರಿಗಿಟ್ ತೆರೆ ಕಾಣುವ ಮೂಲಕ ದಾಖಲೆ ಬರೆದಿದೆ. ಇದು ಕೇವಲ ಚಿತ್ರತಂಡದ ಗೆಲುವಲ್ಲ, ತುಳು ಭಾಷೆಯ ಗೆಲುವಾಗಿದೆ. ಇದೀಗ ಚಿತ್ರವು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ 100ರ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಚಿತ್ರದ ಯಶಸ್ಸಿಗಾಗಿ ದುಡಿದ ಕಲಾವಿದರು, ತಂತ್ರಜ್ಞರು, ಪ್ರತ್ಯಕ್ಷ-ಪರೋಕ್ಷ ಸಹಕರಿಸಿದ ಎಲ್ಲರನ್ನು ಈ ವೇಳೆ ಗೌರವಿಸಲಾಗುವುದು ಎಂದು ರೂಪೇಶ್ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಮಂಜುನಾಥ್ ಅತ್ತಾವರ್, ಕೊರಿಯೋಗ್ರಾರ್ ನವೀನ್ ಶೆಟ್ಟಿ ಉಪಸ್ಥಿತರಿದ್ದರು.