ವರದಿ ಮಾಡುತ್ತಿದ್ದ ಪತ್ರಕರ್ತನ ಕಾಲರ್ ಹಿಡಿದು, ಲಾಠಿ ಬೀಸಿದ ಪೊಲೀಸರು
ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ

ಮಂಗಳೂರು: ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಗರದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೇ ಸಂದರ್ಭ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ 'ವಾರ್ತಾ ಭಾರತಿ' ಇಂಗ್ಲಿಷ್ ವೆಬ್ ಸೈಟ್ ನ ವರದಿಗಾರ ಇಸ್ಮಾಯೀಲ್ ಅವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ.
"ನಾನು ವರದಿಗಾರ ಎಂದು ಐಡಿ ಕಾರ್ಡ್ ತೋರಿಸಿದಾಗ ಪೊಲೀಸರು ಅದನ್ನು ಕಿತ್ತುಕೊಂಡರು. ಆಗ ಅಲ್ಲಿದ್ದ ಇತರ ಪತ್ರಕರ್ತರು ಇದನ್ನು ಪ್ರತಿಭಟಿಸಿದ ನಂತರ ಪೊಲೀಸರು ಐಡಿ ಕಾರ್ಡ್ ಹಿಂದಿರುಗಿಸಿದರು. ನಂತರ ನನ್ನ ಮೇಲೆ ಲಾಠಿ ಬೀಸಿದರು, ಕಾಲರ್ ಪಟ್ಟಿ ಹಿಡಿದರು" ಎಂದು ಇಸ್ಮಾಯೀಲ್ ವಿವರಿಸಿದ್ದಾರೆ.
ಪ್ರತಿಭಟನನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಬಾರದು. ಲಾಠಿ ಚಾರ್ಜ್ ನಡೆಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ನೀಡಿದ ಬೆನ್ನಿಗೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
Next Story









