ಮಕ್ಕಳಿಗೆ ಓದುವ ಆಸಕ್ತಿ ಬೆಳೆಯುವ ರೀತಿಯಲ್ಲಿ ಪಠ್ಯಪುಸ್ತಕ ರಚಿಸಿ: ಅದಮಾರು ಶ್ರೀ

ಉಡುಪಿ, ಡಿ.19: ಪಠ್ಯಪುಸ್ತಕಗಳಲ್ಲಿ ಅಚ್ಚುಕಟ್ಟಾದ ವಿಷಯ, ಜೀವನಕ್ಕೆ ಅನು ಕೂಲಕರವಾದ ಅಂಶಗಳಿದ್ದರೆ ಮಕ್ಕಳು ಸಹಜವಾಗಿ ಆಸಕ್ತಿಯಿಂದ ಆ ಪುಸ್ತಕವನ್ನು ಓದುತ್ತಾರೆ. ಆ ರೀತಿಯ ಮಕ್ಕಳಲ್ಲಿ ಆಸಕ್ತಿ ಬೆಳೆಸುವ ರೀತಿಯಲ್ಲಿ ಪಠ್ಯಪುಸ್ತಕ ಗಳನ್ನು ರಚಿಸಬೇಕು ಎಂದು ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಕ ಸಂಘದ ಸಹಯೋಗದಲ್ಲಿ ಗುರು ವಾರ ಕಾಲೇಜಿನ ಪೂರ್ಣಪ್ರಜ್ಞ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸ ಲಾದ ದ್ವಿತೀಯ ಸೆಮಿಸ್ಟರ್ ಪದವಿ ತರಗತಿಗಳ ನೂತನ ಪಠ್ಯ ಪುಸ್ತಕಗಳ ಅನಾವರಣ ಮತ್ತು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತಿದ್ದರು.
ವಿಷಯಕ್ಕೆ ಸಂಬಂಧ ಇಲ್ಲದ ಮತ್ತು ತಲೆಯಲ್ಲಿ ಮಸ್ತಕ ಇಲ್ಲದವರಿಗೆ ಇಂದು ಪಠ್ಯಪುಸ್ತಕ ರಚಿಸುವ ಜವಾಬ್ದಾರಿ ನೀಡಲಾಗುತ್ತಿದೆ. ಆದುದರಿಂದ ನಮ್ಮ ಸರಕಾರಕ್ಕೂ ಮಸ್ತಕ ಎಂಬುದಿಲ್ಲ ಎಂದು ಗೊತ್ತಾಗುತ್ತದೆ. ಇದರಿಂದ ಮಕ್ಕಳು ಆಸಕ್ತಿಯಿಂದ ಪಠ್ಯ ಪುಸ್ತಕ ಓದುವ ಬದಲು ಅಧ್ಯಾಪಕರೇ ಅವರನ್ನು ಬಲ ವಂತವಾಗಿ ಓದಿಸುವ ಪರಿಸ್ಥಿತಿ ನಮ್ಮಲ್ಲಿ ಇದೆ. ಸಂಸ್ಕೃತದ ಶಬ್ದಗಳ ಅರ್ಥ ಬಾರದಿದ್ದರೂ ಕೇವಲ ಅದನ್ನು ಉಚ್ಛರಿಸಿದರೆ ನಮ್ಮ ಮನಸ್ಸು ಶುದ್ದಿಯಾಗುತ್ತದೆ ಮತ್ತು ನಮಗೆ ಪುಣ್ಯ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಅಮೆರಿಕಾದ ವಿಜ್ಞಾನಿ ಡಾ.ಗುರುಪ್ರಸಾದ್ ಮಾತ ನಾಡಿ, ತುಳು ಭಾಷೆಯನ್ನು ಕಂಪ್ಯೂಟರ್‌ನಲ್ಲಿ ಬಳಸಲು ಬೇಕಾದಷ್ಟು ಅಂಶ ಗಳಿವೆ. ಇತರ ಭಾಷೆಗಳಿಂತ ಮಾತೃಭಾಷೆಗಳಲ್ಲಿ ಹೆಚ್ಚು ಕ್ರಿಯಾಶೀಲತೆ ಇರು ತ್ತದೆ. ಆದುದರಿಂದ ಕಂಪ್ಯೂಟರ್‌ಗಳಲ್ಲಿ ತಮ್ಮ ಮಾತೃಭಾಷೆಗಳನ್ನು ಬಳಸಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಸಂಸ್ಕೃತ ಶಿಕ್ಷಕ ಸಂಘದ ಕಾರ್ಯದರ್ಶಿ ಡಾ.ಮಂಜುನಾಥ್ ಎಸ್.ಭಟ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಾ.ರಮೇಶ್ ಟಿ.ಎಸ್. ಸ್ವಾಗತಿಸಿದರು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







