ಕಾಪು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಕಾಪು, ಡಿ.19: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕದ ವತಿಯಿಂದ ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್‌ನ ಸೌಹಾರ್ದ ಸಭಾಭವನ ದಲ್ಲಿ ಕಾಪು ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸವಾರಂಭವು ಮಂಗಳವಾರ ಜರಗಿತು.
ವಿವಿಧ ಕ್ಷೇತ್ರಗಳ ಸಾಧಕರಾದ ಕಾಷ್ಟಶಿಲ್ಪಿ ಬಾಬು ಆಚಾರ್ಯ ಕಟ್ಟಂಗೇರಿ, ಹಿರಿಯ ಪಾಡ್ದಾನಗಾರ್ತಿ ಅಪ್ಪಿ ಕೃಷ್ಣ ಪಾಣಾರ, ನಾಟಿ ವೈದ್ಯೆ ಶಾಲಿನಿ ಪೂಜಾರಿ ಶಿರ್ವ, ಅಂತಾರಾಷ್ಟ್ರೀಯ ಕ್ರೀಡಾಪಟು ಸುಲತಾ ಕಾಮತ್ ಕಟಪಾಡಿ, ಸಾಹಿತಿ ಹೊರನಾಡ ಕನ್ನಡ ಸಂಘಟಕ ಕಟ್ಟಿಂಗೇರಿ ಸುಭಾಸ್‌ಚಂದ್ರ ಹೆಗ್ಡೆ, ಹಿರಿಯ ಯಕ್ಷಗುರು ವಾಸುದೇವ ರಾವ್ ಎರ್ಮಾಳು, ಡೋಲು ವಾದಕ ವಸಂತ ಬೆಳ್ಳೆ, ಯಕ್ಷ ಸಂಘಟಕ ನಾಲ್ಕುಬೀದಿ ವಿಠಲ ನಾಯಕ್, ಹಿರಿಯ ನಾಗಸ್ವರ ವಾದಕ ಚಂದಯ್ಯ ಸೇರಿಗಾರ, ಪ್ರಗತಿಪರ ಕೃಷಿಕ ಲಾರೆನ್ಸ್ ಆಳ್ವ ಇವರನ್ನು ಸನ್ಮಾನಿಸಲಾಯಿತು.
ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ, ಶಿರ್ವದ ನಿವೃತ್ತ ಉಪನ್ಯಾಸಕ ಕೆ.ಎಸ್.ಶ್ರೀಧರಮೂರ್ತಿ, ಕನ್ನಡ ನಶಿಸುವ ಭಾಷೆಯಲ್ಲ. ಕನ್ನಡದ ಬೇರುಗಳು ತಳಮಟ್ಟದಲ್ಲಿ ಭದ್ರವಾಗಿದೆ. ಅದಕ್ಕೆ ವಿಶ್ವಮಟ್ಟದಲ್ಲಿ ಎದ್ದು ನಿಲ್ಲುವ ಶಕ್ತಿ ಇದೆ. ಯಾವುದೇ ಭಾಷೆಗೆ ಸತ್ವ, ಸೌಂದರ್ಯ ಬರಬೇಕಾದರೆ ಸಾಹಿತ್ಯ ಉತ್ತಮವಾಗಿರಬೇಕು. ಕನ್ನಡದಲ್ಲಿ ಕಾದಂಬರಿ, ಕಾವ್ಯ, ಕಥೆ, ಸಣ್ಣಕಥೆ, ವೈಚಾರಿಕ ಲೇಖನಗಳು ಹೇರಳವಾಗಿ ಬಂದಿವೆ ಎಂದರು.
ಸಮ್ಮೇಳನಾಧ್ಯಕ್ಷ ಹಿರಿಯ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಪ್ರತಿಸ್ಪಂದನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು.
ಸಮ್ಮೇಳನದ ಗೌರವ ಅಧ್ಯಕ್ಷ ರೆ.ಫಾ.ಕ್ಲಮೆಂಟ್ ಮಸ್ಕರೇನ್ಹಸ್, ಕರ್ಣಾಟಕ ಬ್ಯಾಂಕ್‌ನ ಡಿಸಿಎಂ ಗೋಪಾಲಕೃಷ್ಣ ಸಾಮಗ, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಮಾಜಿ ಜಿಪಂ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಬೆಳ್ಳೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಬಾ, ಬೆಳ್ಳೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್‌ಕುಮಾರ್, ಕಸಾಪ ಬ್ರಹ್ಮಾವರ ಅಧ್ಯಕ್ಷ ನಾರಾಯಣ ಮಡಿ, ಗ್ರಾಪಂ ಸದಸ್ಯರಾದ ಸುಧಾಕರ ಪೂಜಾರಿ, ಗುರುರಾಜ ಭಟ್, ಸಂತೋಷ್ ಕುಮಾರ್ ಮೂಡುಬೆಳ್ಳೆ, ಕಾಪು ಕಸಾಪ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ, ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಬಾರ್, ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಉಪಸ್ಥಿತರಿದ್ದರು.
ಸಮಿತಿ ಸದಸ್ಯೆ ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ವಿದ್ಯಾಧರ ಪುರಾಣಿಕ್ ವಂದಿಸಿದರು. ಸುಜಾತಾ ಸುವರ್ಣ, ಎಡ್ವರ್ಡ್ ಲಾರ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







