ಕಟ್ಟಡ ಕಾರ್ಮಿಕರಿಗೆ ಮರಳು ಗಂಭೀರ ಸಮಸ್ಯೆ: ಅಲೆಕ್ಸಾಂಡರ್

ಸಿದ್ಧಾಪುರ, ಡಿ.19: ಮರಳು ಸಮಸ್ಯೆ ಪ್ರಸ್ತುತ ವರ್ಷದಲ್ಲಿಯೂ ಬಗೆಹರಿಯ ದಿದ್ದರೆ ಕಟ್ಟಡ ಕಾರ್ಮಿಕರ ಬದುಕು ಗಂಭೀರ ಸಮಸ್ಯೆಯಾಗಲಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಸಿದ್ಧಾಪುರ ಘಟಕದ ಅಧ್ಯಕ್ಷ ಅಲೆಕ್ಸಾಂಡರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸಿದ್ಧಾಪುರದ ಸಂಘದ ಕಛೇರಿಯಲ್ಲಿ ಇತ್ತೀಚೆಗೆ ನಡೆದ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡುತಿದ್ದರು. ಮರಳು ಸಮಸ್ಯೆಯನ್ನು ಸರಕಾರ ಶೀಘ್ರ ಪರಿಹಾರ ಮಾಡದಿದ್ದರೆ ಉಡುಪಿ ಜಿಲ್ಲೆಯಾದ್ಯಂತಹ ಕಟ್ಟಡ ಕಾರ್ಮಿಕರು ಜ.8 ರಂದು ಮುಷ್ಕರ ಹೂಡಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಘಟಕ ಮಹಾಸಭೆಯನ್ನು ಉದ್ಘಾಟಿಸಿದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಸರಕಾರಕ್ಕೆ ಜಿಲ್ಲೆಯ ಜನರ ಮರಳು ಸಮಸ್ಯೆ ಗಂಭೀರ ಸಮಸ್ಯೆಯಾಗಿ ಕಾಣದಿರುವುದು ದುರಾ ದೃಷ್ಟಕರ. ಇದರ ವಿರುದ್ಧ ಸಾರ್ವಜನಿಕರು ಹೋರಾಟಕ್ಕಿಳಿಯಬೇಕಾಗಿದೆ. ಆದು ರಿಂದ ಜ.8ರ ಕಾರ್ಮಿಕರ ಮುಷ್ಕರಕ್ಕೆ ಜನರು ಬೆಂಬಲಿಸಬೇಕೆಂದು ಹೇಳಿದರು. ಸಭೆಯಲ್ಲಿ ಸಿದ್ದಾಪುರ ಘಟಕದ ಮುಖಂಡ ಶೇಷಗಿರಿ ಆಚಾರಿ ವರದಿ ಮಂಡಿಸಿ, ಸ್ವಾಗತಿಸಿದರು. ಲಕ್ಷಣ ವಂದಿಸಿದರು.





