ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿ: ನಿಷೇಧಾಜ್ಞೆಗೆ ಸಿಪಿಎಂ ಖಂಡನೆ
ಉಡುಪಿ, ಡಿ.19: ಕರ್ನಾಟಕ ಸರಕಾರ ರಾಜ್ಯದಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರುವ ಮೂಲಕ ಜನರ ಪ್ರತಿಭಟನಾ ಹಕ್ಕಿನ ಮೇಲೆ ದಾಳಿ ನಡೆಸಿದೆಯೆಂದು ಸಿಪಿಐಎಂ ಉುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಂವಿಧಾನ ವಿರೋಧಿ ಹಾಗೂ ಜಾತ್ಯತೀತ ಪ್ರಜಾಪ್ರಭುತ್ವದ ವಿರೋಧಿ ಯಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ವಾಪಾಸು ಪಡೆಯ ಬೇಕೆಂದು ಒತ್ತಾಯಿಸಿ ನಡೆಯುವ ಎಡಪಕ್ಷಗಳ ಮತ್ತು ಪ್ರಜೆಗಳ ಹೋರಾಟ ವನ್ನು ಹತ್ತಿಕ್ಕಲು ಯಡೆಯೂರಪ್ಪನವರ ಸರಕಾರ ಸರ್ವಾಧಿಕಾರಿಯಂತೆ ಕ್ರಮ ವಹಿಸಿ ಜನತೆಯನ್ನು ಬೆದರಿಸುತ್ತದೆ. ಆದುದರಿಂದ ನಿಷೇಧಾಜ್ಞೆ ಯನ್ನು ಈ ಕೂಡಲೇ ವಾಪಾಸು ಪಡೆದು ಪ್ರತಿಭಟನಾ ಹಕ್ಕನ್ನು ಎತ್ತಿ ಹಿಡಿಯಲು ಕ್ರಮವಹಿಸಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ರಾಜ್ಯ ಸರಕಾರವನ್ನು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story





