ಕೇರಳದ ಮಾಜಿ ಸಚಿವ ಥಾಮಸ್ ಚಾಂಡಿ ಇನ್ನಿಲ್ಲ

ಕೊಚ್ಚಿ,ಡಿ.20: ಕೇರಳದ ಮಾಜಿ ಸಚಿವ ಹಾಗೂ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಶಾಸಕ ಥಾಮಸ್ ಚಾಂಡಿ ಶುಕ್ರವಾರ ನಿಧನರಾಗಿದ್ದಾರೆ.
ಅವರಿಗೆ 72 ವರ್ಷ ವಯಸ್ಸಾಗಿದ್ದು, ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಅವರು ಕೊಚ್ಚಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಉದ್ಯಮಿಯಾಗಿದ್ದು, ಆನಂತರ ರಾಜಕೀಯರಂಗಕ್ಕೆ ಧುಮುಕಿದ ಥಾಮಸ್ ಚಾಂಡಿ ಅವರು ಅಲ್ಪಪ್ಪುಳ ಜಿಲ್ಲೆಯ ಕುಟ್ಟನಾಡ್ ಕ್ಷೇತ್ರದ ಶಾಸಕರಾಗಿದ್ದಾರೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಥಾಮಸ್‌ಚಾಂಡಿ ಅವರು ಭೂ ಅತಿಕ್ರಮಣ ಆರೋಪದ ಎದುರಿಸಿದ ಬಳಿಕ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
ಥಾಮಸ್ ಚಾಂಡಿ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Next Story





