ಉಡುಪಿ- ಮಂಗಳೂರು ಎಕ್ಸ್‌ಪ್ರೆಸ್ ಬಸ್ ಸಂಚಾರ ಸ್ಥಗಿತ
ಉಡುಪಿ, ಡಿ.20: ಮಂಗಳೂರು ನಗರದಲ್ಲಿ ವಿಧಿಸಲಾಗಿರುವ ಕರ್ಫ್ಯು ಹಿನ್ನೆಲೆಯಲ್ಲಿ ಉಡುಪಿಯಿಂದ ಮಂಗಳೂರಿಗೆ ತೆರಳುವ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ ಇಂದು ಬೆಳಗ್ಗೆಯಿಂದ ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರು ತೀರಾ ತೊಂದರೆ ಅನುಭವಿಸಬೇಕಾಯಿತು.
ಮಂಗಳೂರಿಗೆ ತೆರಳುವ ಯಾವುದೇ ಎಕ್ಸ್‌ಪ್ರೆಸ್ ಬಸ್ಸುಗಳು ಇಂದು ಓಡಾಟ ನಡೆಸಿಲ್ಲ. ಲೋಕಲ್ ಬಸ್‌ಗಳು ಹಳೆಯಂಗಡಿ, ಸುರತ್ಕಲ್‌ವರೆಗೆ ಮಾತ್ರ ಹೋಗುತ್ತಿತ್ತು. ಉಳಿದಂತೆ ಕುಂದಾಪುರ ಹಾಗೂ ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ಗಳು ಎಂದಿನಂತೆ ಸಂಚರಿಸಿದವು ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
Next Story





