ಪೇಜಾವರ ಶ್ರೀ ಚೇತರಿಕೆಗಾಗಿ ಹರಿನಾಮ ಸಂಕೀರ್ತನೆ

ಉಡುಪಿ, ಡಿ.20: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ರುವ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗಳು ಶೀಘ್ರ ಗುಣಮುಖ ವಾಗಲೆಂದು ಪ್ರಾರ್ಥಿಸಿ, ಹರಿನಾಮ ಸಂಕೀರ್ತನೆ ಕಾರ್ಯಕ್ರಮವು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ನಗರದ ಮಾರುಥಿ ವೀಥಿಕಾದಲ್ಲಿರುವ ಭಜನಾ ಮಂಟಪದಲ್ಲಿ ನಡೆಯಿತು.
ಉಡುಪಿ ನಗರ ವಲಯ ಭಜನಾ ಮಂಡಳಿಗಳ ಭಜಕರು ಹರಿನಾಮ ಸಂಕೀರ್ತನೆ ನಡೆಸಿಕೊಟ್ಟರು. ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ.ಬಾಲಗಂಗಾಧರ್ ರಾವ್, ಸುಧಾಕರ್ ದೇವಾಡಿಗ, ಡೇವಿಡ್, ತಾರಾನಾಥ್ ಮೇಸ್ತ ಶಿರೂರು, ನಗರ ವಲಯ ಭಜನಾ ಮಂಡಳಿಗಳ ಪ್ರಮುಖರಾದ ಕಿಶೋರ್ ಕರ್ನಪಾಡಿ, ಅಮೀತಾ ಗಿರೀಶ್, ಮಿತ್ರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





