ಸಿಡ್ನಿ: ಕಾಡ್ಗಿಚ್ಚು ನಂದಿಸುತ್ತಿದ್ದ ಇಬ್ಬರು ಅಗ್ನಿಶಾಮಕರ ಸಾವು

ಸಾಂದರ್ಭಿಕ ಚಿತ್ರ
ಸಿಡ್ನಿ, ಡಿ. 20: ಸಿಡ್ನಿಯ ಸುತ್ತ ಹಬ್ಬಿರುವ ಕಾಡ್ಗಿಚ್ಚನ್ನು ನಂದಿಸುವ ಕೆಲಸದಲ್ಲಿ ತೊಡಗಿದ್ದ ಇಬ್ಬರು ಹವ್ಯಾಸಿ ಅಗ್ನಿಶಾಮಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ ಅಮೆರಿಕದ ಹವಾಯಿ ದ್ವೀಪದ ಪ್ರವಾಸದಲ್ಲಿರುವ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ತನ್ನ ಪ್ರವಾಸವನ್ನು ರದ್ದುಪಡಿಸಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ.
ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಹಲವು ವಾರಗಳಿಂದ ಕಾಡ್ಗಿಚ್ಚು ವ್ಯಾಪಿಸುತ್ತಿದೆ. ಕಾಡ್ಗಿಚ್ಚಿನಿಂದಾಗಿ ಈವರೆಗೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 700ಕ್ಕೂ ಅಧಿಕ ಮನೆಗಳು ಸುಟ್ಟುಹೋಗಿವೆ. ಸುಮಾರು 30 ಲಕ್ಷ ಎಕರೆ ಕಾಡು ನಾಶವಾಗಿದೆ.
Next Story





