ಆಶ್ವಾಸನೆಗೆ ಅಮಿತ್ ಶಾ ಬದ್ಧರೇ?

ಪೌರತ್ವ ತಿದ್ದುಪಡೆ ಕಾಯ್ದೆ ವಿರುದ್ಧ ಪ್ರತಿಭಟಿಸುವ ಬದಲು ಭಾರತದ ಮುಸ್ಲಿಮರು ಗೃಹಸಚಿವ ಅಮಿತ್ ಶಾ ಆಡಿರುವ ಮಾತುಗಳು ಜಾರಿಯಾಗುವಂತೆ ಪಟ್ಟು ಹಿಡಿಯಬೇಕು. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಪ್ರತಿಭಟನೆಗಳು ಹಾಗೂ ಪೊಲೀಸ್ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಇದು ಅನಿವಾರ್ಯ. ಯಾಕೆಂದರೆ ಈ ಪ್ರತಿಭಟನೆಗಳು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಅವುಗಳನ್ನು ಚಿತ್ರಿಸುತ್ತದೆ. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ (ಕ್ಯಾಬ್) ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡುತ್ತ ಅಮಿತ್ ಶಾ ಹೇಳಿದರು:
‘‘ಮಸೂದೆಯಲ್ಲಿ ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳಲು ಅವಕಾಶವಿಲ್ಲ ಬದಲಾಗಿ ನಿರಾಶ್ರಿತರಿಗೆ ನಾಗರಿಕತ್ವ ನೀಡುವುದೇ ಅದರ ಉದ್ದೇಶ. ಆದ್ದರಿಂದ ಭಾರತದ ಮುಸ್ಲಿಮರು ಭಯದಲ್ಲಿ ಬದುಕುವ ಅವಶ್ಯಕತೆಯಿಲ್ಲ’’. ಭಾರತದ ಮುಸ್ಲಿಮರು ಈ ಆಶ್ವಾಸನೆಗೆ ಶಾರವರು ಬದ್ಧರಾಗಿರುವಂತೆ ನೋಡಿಕೊಳ್ಳವುದು ಅತ್ಯವಶ್ಯಕ. ಆಗ ಅವರ ಹಿತಾಸಕ್ತಿಗಳನ್ನು ಅವರು ಇನ್ನಷ್ಟು ಚೆನ್ನಾಗಿ ಕಾಪಾಡಿಕೊಳ್ಳಬಲ್ಲರು.
ಯಾಕೆಂದರೆ ಮೊದಲನೆಯದಾಗಿ ನಾಗರಿಕತ್ವ ನೀಡಲು ಕ್ಯಾಬ್, ಧರ್ಮದ ನೆಲೆಯಲ್ಲಿ ತಾರತಮ್ಯ ಮಾಡುವುದರಿಂದ ಸುಪ್ರೀಂಕೋರ್ಟ್ ಅದನ್ನು ಅಸ್ಸಾಂ ವಿಧಾನಿಕವೆಂದು ಘೋಷಿಸುವ ಸಾಧ್ಯತೆ ಇದೆ.
ಎರಡನೆಯದಾಗಿ, ಕ್ಯಾಬ್ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿರುವುದರಿಂದ ಅದು ಕೂಡಲೇ ಜಾರಿಯಾಗದಿರಬಹುದು. ತಿದ್ದುಪಡಿ ಕಾಯ್ದೆಯ ವಿರುದ್ಧ ಅಸ್ಸಾಂ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳು ಸಿಡಿದೆದ್ದಿವೆ. ಅಲ್ಲಿ ವ್ಯಾಪಕ ಹಿಂಸೆ ತಾಂಡವವಾಡಿದೆ.
ಮೂರನೆಯದಾಗಿ, ಕಾಯ್ದೆಯ ವಿರುದ್ಧ ಹಿಂದೂಗಳಲ್ಲಿ ಹಾಗೂ ಮುಸ್ಲಿಮರಲ್ಲಿರುವ ಸೆಕ್ಯುಲರ್ ಶಕ್ತಿಗಳು ಜಂಟಿಯಾಗಿ ಹೋರಾಡಬೇಕು ಹೊರತು ಅದು ಹಿಂದೂ ಮುಸ್ಲಿಮರ ಪ್ರಶ್ನೆಯೆಂದು ಬಿಂಬಿತವಾಗ ಕೂಡದು. ಹೀಗೆ ಬಿಂಬಿತವಾದಲ್ಲಿ ಹೋರಾಟದ ಉದ್ದೇಶವೇ ವಿಫಲವಾಗುತ್ತದೆ.
ಕೊನೆಯದಾಗಿ, ಮುಸ್ಲಿಮರು ಪ್ರಸ್ತಾವಿತ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು (ಎನ್‌ಆರ್‌ಸಿ) ಉಗ್ರವಾಗಿ ವಿರೋಧಿಸಬೇಕು. ಈ ವಿಷಯದಲ್ಲಿ ಅವರು ಶಾ ಅವರನ್ನು ಅವರ ಮಾತಿಗೆ ಬದ್ಧರಾಗಿರುವಂತೆ ಆಗ್ರಹಿಸಿ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ತಮ್ಮ ವಿರುದ್ಧ ಯಾವುದೇ ತಾರತಮ್ಯ ನಡೆಯದಂತೆ ಒತ್ತಾಯಿಸಬೇಕು. ಇಂತಹ ತಾರತಮ್ಯವೇನಾದರೂ ನಡೆದಲ್ಲಿ ಅದು ಕ್ಯಾಬ್‌ಗಿಂತ ಹೆಚ್ಚು ತಾರತಮ್ಯದ ವಿಷಯವಾಗುತ್ತದೆ. ಆದರೆ ಆಗ ಇದನ್ನು ರದ್ದುಮಾಡಲೇಬೇಕೆಂದು ಅವರು ನ್ಯಾಯಾಲಯಗಳಿಗೆ ಹೋದಲ್ಲಿ ಅವರ ವಾದಕ್ಕೆ ಹೆಚ್ಚು ವ್ಯಾಪಕವಾದ ಬೆಂಬಲದೊರೆಯುತ್ತದೆ.
ಬಿಜೆಪಿಯ ಪಾಲಿಗೆ ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆ ತಿರುಗುಬಾಣವಾಯಿತು. 19 ಲಕ್ಷ ಕ್ಕಿಂತಲೂ ಹೆಚ್ಚು ಮಂದಿ ಎನ್‌ಆರ್‌ಸಿ ಯಾದಿಯಿಂದ ಹೊರಗುಳಿದರು. ಇವರಲ್ಲಿ ಗಣನೀಯ ಸಂಖ್ಯೆಯ ಮಂದಿ ಬಾಂಗ್ಲಾದೇಶದಿಂದ ಬಂದಿದ್ದ ಬಂಗಾಲಿ ಹಿಂದೂ ವಲಸಿಗರು. ಇದರಿಂದ ಅಸಮಾಧಾನಗೊಂಡ ಅಸ್ಸಾಂ ಬಿಜೆಪಿ ರಾಷ್ಟ್ರವ್ಯಾಪಿಯಾದ ಒಂದು ಎನ್‌ಆರ್‌ಸಿಗಾಗಿ ಬೇಡಿಕೆ ಸಲ್ಲಿಸಿತು. ಕ್ಯಾಬ್‌ನ ಮೂಲ ಉದ್ದೇಶ ಹಿಂದೂ ಬಾಂಗ್ಲಾದೇಶಿಗಳಿಗೆ ಪೌರತ್ವ ನೀಡುವುದು. ಅದೇನಿದ್ದರೂ, ಕ್ಯಾಬ್ ಅಸ್ಸಾಮಿನಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತು. ಇದನ್ನು ಬಿಜೆಪಿ ನಿರೀಕ್ಷಿಸಿರಲಿಲ್ಲ. ಇದು ಬಂಗಾಲಿಗಳ ಹಾಗೂ ಕೇಂದ್ರ ಸರಕಾರದ ವಿರುದ್ಧ ಎದ್ದಿರುವ ಬಿರುಗಾಳಿಯಾಗಿದೆ. ಇದು ಅವಿಭಜಿತ ಅಸ್ಸಾಮಿನಲ್ಲಿ 1980ರ ದಶಕದಲ್ಲಿ ನಡೆದ ಬಂಗಾಲಿ ವಿರೋಧಿ ದೊಂಬಿಗಳನ್ನು ನಮಗೆ ಜ್ಞಾಪಿಸುತ್ತದೆ. ಇದರ ಪರಿಣಾಮವಾಗಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಅಸ್ಸಾಮಿನಲ್ಲಿ ಸೋಲು ಅನುಭವಿಸಬೇಕಾಗಬಹುದು.
ಈ ಎಲ್ಲ ಅಂಶಗಳ ಪರಿಣಾಮವಾಗಿ, ಮುಸ್ಲಿಮರು ಕ್ಯಾಬ್‌ನ ಸುತ್ತ ಇರುವ ವಿವಾದವು ಒಂದು ಹಿಂದೂ ಮುಸ್ಲಿಮ್ ವಿವಾದವಾಗಿ ಪರಿವರ್ತತೆಯಾಗುವುದನ್ನು ತಡೆಯಲು ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಯಾಕೆಂದರೆ, ಇಲ್ಲವಾದಲ್ಲಿ ಅವರು ರಾಷ್ಟ್ರವಿರೋಧಿ ಎಂಬ ಹಣೆ ಪಟ್ಟಿಗೆ ಗುರಿಯಾಗಬೇಕಾದೀತು: ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರ ಪರವಾಗಿ ಅವರು ಚಳವಳಿ ಮಾಡುತ್ತಿದ್ದಾರೆಂಬ ತಪ್ಪು ಭಾವನೆ ಬರದಂತೆ ಅವರು ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಈ ವಿಷಯದಲ್ಲಿ ಭಾರತದ ಮುಸ್ಲಿಮರು ತಮ್ಮನ್ನು ಪಾನ್- ಇಸ್ಲಾಮಿಕ್ ಎಂದು ಬಿಂಬಿಸಿಕೊಳ್ಳುವುದು ತಾವು ಯಾವುದೇ ಒಂದು ಧರ್ಮದ (ಇಸ್ಲಾಮಿನ) ನೆಲೆಯಲ್ಲಿ ಕ್ಯಾಬ್‌ಅನ್ನು ವಿರೋಧಿಸುತ್ತಿಲ್ಲವೆಂದು ವಿಶ್ವದ ಮುಂದೆ ತೋರಿಸಿಕೊಡುವುದು ಬಹಳ ಮುಖ್ಯವಾಗುತ್ತದೆ. ಪ್ರಸ್ತಾವಿತ ಎನ್‌ಆರ್‌ಸಿಯನ್ನು ವಿರೋಧಿಸಲು ಅವರು ತಮ್ಮ ರಾಜಕೀಯ ಶಕ್ತಿ, ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಅವರು ತಾವು ಪಾನ್-ಇಸ್ಲಾಮಿಕ್ ಎಂದು ತಮ್ಮನ್ನು ಚಿತ್ರಿಸಿಕೊಳ್ಳವುದು ಸದ್ಯದ ಸಂದರ್ಭದಲ್ಲಿ ವಿಶೇಷವಾಗಿ ಮುಖ್ಯವಾಗುತ್ತದೆ. ಅವರ ಭವಿಷ್ಯಕ್ಕೆ ಕ್ಯಾಬ್‌ಗಿಂತ ಎನ್‌ಆರ್‌ಸಿ ಬಹಳ ಹೆಚ್ಚು ಪ್ರಸ್ತುತವಾಗಲಿದೆ.
ಕೃಪೆ: thehindu.in







