Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಂಗಳೂರು ಹಿಂಸಾಚಾರ: ಪೊಲೀಸರನ್ನು...

ಮಂಗಳೂರು ಹಿಂಸಾಚಾರ: ಪೊಲೀಸರನ್ನು ಪ್ರಶ್ನಿಸುತ್ತಿರುವ ಸಿಸಿ ಕ್ಯಾಮರಾಗಳ ದೃಶ್ಯಗಳು

ವಾರ್ತಾಭಾರತಿವಾರ್ತಾಭಾರತಿ20 Dec 2019 11:59 PM IST
share
ಮಂಗಳೂರು ಹಿಂಸಾಚಾರ: ಪೊಲೀಸರನ್ನು ಪ್ರಶ್ನಿಸುತ್ತಿರುವ ಸಿಸಿ ಕ್ಯಾಮರಾಗಳ ದೃಶ್ಯಗಳು

ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರು ಎಸಗಿದ ಕ್ರೌರ್ಯ ಕೂಡ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಾಗೆಂದು ಇಲ್ಲಿನ ಪ್ರತಿಭಟನೆಯಲ್ಲಿ ಲಕ್ಷಾಂತರ ಜನರೇನೂ ಭಾಗವಹಿಸಿರಲಿಲ್ಲ. ಜಾಮಿಯಾ ಮಿಲ್ಲಿಯಾ ಹೋರಾಟದಲ್ಲಿ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳಿದ್ದರು. ಅಷ್ಟೂ ಸಂಖ್ಯೆಯ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಕಾನೂನು ಸುವ್ಯವಸ್ಥೆ ಹದಗೆಡುವುದು ಸಹಜ ಎಂದು ಭಾವಿಸಬಹುದು. ಅಸ್ಸಾಮಿನ ಪ್ರತಿಭಟನೆಯ ಜನಸಾಗರಕ್ಕೆ ಹೋಲಿಸಿದರೆ ಮಂಗಳೂರಿನಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ನೂರು ಜನರೂ ಇದ್ದಿರಲಿಲ್ಲ. ಆದರೆ ಅಲ್ಲಿ ಸಂಭವಿಸದೇ ಇದ್ದುದು ಇಲ್ಲಿ ಸಂಭವಿಸಿತು. ಇಷ್ಟೂ ಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ಅಂತಿಮವಾಗಿ ಗೋಲಿಬಾರ್ ನಡೆಸಿರುವುದು ಆಘಾತಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ, ಕಲಬುರಗಿಯಲ್ಲಿ ಅದೇ ದಿನ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಜನ ಪ್ರತಿಭಟನೆ ನಡೆಸಿದಾಗಲೂ ನಡೆಯದ ಹಿಂಸೆ, ಮಂಗಳೂರಿನಲ್ಲಿ ಬರೇ ನೂರು ತರುಣರು ಬೀದಿಗಿಳಿದು ಘೋಷಣೆ ಕೂಗಿದಾಗ ಯಾಕೆ ನಡೆಯಿತು ಎಂಬ ಪ್ರಶ್ನೆ ಈಗ ಮಹತ್ವ ಪಡೆದುಕೊಳ್ಳುತ್ತಿದೆ.

ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗುತ್ತಿರುವ ನಗರದ ವಿವಿಧೆಡೆಗಳ ಸಿಸಿ ಟಿವಿ ದೃಶ್ಯಗಳು ನಿಜಕ್ಕೂ ನಡೆದಿರುವುದೇನು, ಹಿಂಸಾಚಾರಕ್ಕೆ ಇಳಿದವರು ಯಾರು ಎನ್ನುವುದನ್ನು ಬಯಲು ಮಾಡುತ್ತಿವೆ. ಮನುಷ್ಯ ಜೀವದ ಘನತೆಯನ್ನು ಅರಿಯದ, ಕಾನೂನು ಸುವ್ಯವಸ್ಥೆಯ ಸೂಕ್ಷ್ಮಗಳ ಕುರಿತಂತೆ ಎಳ್ಳಷ್ಟೂ ಅರಿವಿರದ, ತಾವು ಧರಿಸಿದ ಖಾಕಿಯ ವೌಲ್ಯಗಳ ಬಗ್ಗೆಯೇ ನಿರಕ್ಷರಿಗಳಾಗಿರುವ ಪೊಲೀಸರ ಕೈಗೆ ಬಂದೂಕು ಕೊಟ್ಟು ಬೀದಿಗಿಳಿಸಿದರೆ ಮಾತ್ರ ಇಂತಹ ದುರಂತಗಳು ಸಂಭವಿಸಬಹುದು. ಪ್ರತಿಭಟನಾಕಾರರ ಸಣ್ಣ ಗುಂಪನ್ನು ಸ್ವಯಂ ಪ್ರಚೋದಿಸಿ, ಲಾಠಿ ಬೀಸುವ ಅಗತ್ಯವೂ ಇಲ್ಲದ ಸನ್ನಿವೇಶವನ್ನು ಗೋಲಿಬಾರ್‌ಗೆ ತಿರುಗಿಸಿ ಇಬ್ಬರು ನಾಗರಿಕರ ಹತ್ಯೆಗೆ ಪೊಲೀಸ್ ಇಲಾಖೆಯೇ ಕಾರಣವಾಯಿತೇ ಎನ್ನುವುದು ನಗರದ ಸಿಸಿ ಟಿವಿಗಳು ಬಹಿರಂಗ ಪಡಿಸಿದ ದೃಶ್ಯಗಳು ಕೇಳುತ್ತಿವೆ. ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿರುವ ದೃಶ್ಯಗಳು ಮತ್ತು ಪೊಲೀಸರ ವರ್ತನೆಳಿಂದ ಗೊತ್ತಾಗುವುದೇನೆಂದರೆ, ಪ್ರತಿಭಟನೆಯನ್ನು ಯಾವ ರೀತಿಯಲ್ಲಾದರೂ ಹಿಂಸಾಚಾರಕ್ಕೆ ತಿರುಗಿಸಲೇಬೇಕು ಎನ್ನುವ ಒತ್ತಡಗಳು ಅವರಲ್ಲಿತ್ತು. ಒಂದಿಷ್ಟು ಜನರ ಗುಂಪು ಒಟ್ಟು ಸೇರಿ ಹತ್ತು ಘೋಷಣೆಗಳನ್ನು ಕೂಗಿ ಮನೆಗೆ ತೆರಳುವ ಸಾಧ್ಯತೆ ಇದ್ದ ಪ್ರಕರಣವನ್ನು, ಯದ್ವಾತದ್ವಾ ಲಾಠಿಗಳನ್ನು ಬಳಸಿ ಪ್ರಚೋದಿಸಿ, ಅವರನ್ನು ಪ್ರತಿ ಹಿಂಸೆಗೆ ಪ್ರೇರೇಪಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಪ್ರತಿಭಟನಾಕಾರರು ಕಲ್ಲುಗಳನ್ನು ಕೈಗೆತ್ತಿ ಪೊಲೀಸರೆಡೆಗೆ ತೂರುವುದನ್ನೇ ಕಾಯುತ್ತಿದ್ದವರಂತೇ ನೇರವಾಗಿ ಜನರೆಡೆಗೆ ಪೊಲೀಸರು ಗುಂಡು ಹಾರಿಸತೊಡಗಿದರು. ಪೊಲೀಸರ ಹಿಂಸೆಯ ವಿವರಗಳು ಇತರೆಡೆಗೆ ಹರಡುತ್ತಿದ್ದಂತೆಯೇ ಜನರ ಗುಂಪುಗಳು ವಿವಿಧ ಗಲ್ಲಿಗಳಿಂದ ಪ್ರತಿಭಟನಾಕಾರರ ಜೊತೆಗೆ ಸೇರಿಕೊಂಡವು. ಪೊಲೀಸರಂತೂ, ತಾವು ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ಎಸಗುವ ರೋಚಕ ಸ್ನನ್ನಿವೇಶವನ್ನು ಸ್ವಯಂ ಕಲ್ಪಿಸಿಕೊಂಡು ನೇರವಾಗಿ ಪ್ರತಿಭಟನಾಕಾರರೆಡೆಗೆ ಗುಂಡು ಹಾರಿಸುತ್ತಿರುವ ದೃಶ್ಯಗಳು ದಾಖಲಾಗಿವೆ. ಇದಾದ ಬಳಿಕ, ಮೃತರು ಮತ್ತು ಗಾಯಾಳುಗಳಿದ್ದ ಸ್ಥಳೀಯ ಖಾಸಗಿ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸರ ವರ್ತನೆ ಅತ್ಯಂತ ಆಘಾತಕಾರಿಯಾಗಿದೆ. ಈಗಾಗಲೇ ದಿಲ್ಲಿಯಲ್ಲಿ ಪೊಲೀಸರು ವಿಶ್ವವಿದ್ಯಾನಿಲಯದೊಳಗೆ ನುಗ್ಗಿರುವುದು ವಿವಾದಕ್ಕೊಳಗಾಗಿ, ತನಿಖೆ ನಡೆಯುತ್ತಿದೆ. ಆದರೆ ಇಲ್ಲಿ ದುಷ್ಕರ್ಮಿಗಳನ್ನು ಹುಡುಕುವ ನೆಪದಲ್ಲಿ ಆಸ್ಪತ್ರೆಯೊಳಗೆ ನುಗ್ಗಿದ್ದಾರೆ. ಜೊತೆಗೆ ಆಸ್ಪತ್ರೆಯ ಒಳಗಡೆಯೇ ಅಶ್ರುವಾಯು ಸಿಡಿಸಿದ್ದಾರೆ. ರೋಗಿಗಳ ಕೊಠಡಿಗಳ ಬಾಗಿಲುಗಳನ್ನು ಒದ್ದು ಒಳಹೋಗುವ ಪ್ರಯತ್ನ ಮಾಡಿದ್ದಾರೆ. ಐಸಿಯುಗೂ ನುಗ್ಗಿ ಲಾಠಿ ಬೀಸಿದ್ದಾರೆ. ನೂರಾರು ರೋಗಿಗಳಿರುವ ಆಸ್ಪತ್ರೆಯೊಳಗೆ ನುಗ್ಗಿ ಪೊಲೀಸರು ನಡೆಸಿದ ದಾಂಧಲೆ ಮನುಷ್ಯ ಮತ್ತು ಆಸ್ಪತ್ರೆಗಳ ಘನತೆಗೆ ಮಾಡಿದ ಬಹುದೊಡ್ಡ ಕಳಂಕವಾಗಿದೆ. ಇಂತಹ ಮಾನವ ಹಕ್ಕು ಉಲ್ಲಂಘನೆ ದಿಲ್ಲಿಯಲ್ಲೂ ನಡೆದಿರಲಿಲ್ಲ.

ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆನ್ನುವ ನೆಪವನ್ನು ಮುಂದೊಡ್ಡಿ ಪೊಲೀಸರು ಆಸ್ಪತ್ರೆಯೊಳಗೆ ನಡೆಸಿದ ಕಾರ್ಯಾಚರಣೆ ಕಾನೂನು ವ್ಯವಸ್ಥೆಯನ್ನು ಮರುಸ್ಥಾಪಿಸುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. ಬದಲಿಗೆ ಸೇಡಿಗೆ ಸೇಡು ಎನ್ನುವ ಗೂಂಡಾ ಮನಸ್ಥಿತಿ ಅವರಲ್ಲಿ ಎದ್ದು ಕಾಣುತ್ತಿತ್ತು. ಎಲ್ಲಕ್ಕಿಂತ ಆತಂಕಕಾರಿ ಅಂಶವೆಂದರೆ, ನಡೆದ ಕೃತ್ಯಗಳ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಲ್ಲಿ ಯಾವ ವಿಷಾದವೂ ಇಲ್ಲದಿರುವುದು. ಮಂಗಳೂರಿನ ರಸ್ತೆಯಲ್ಲಿ ನಿನ್ನೆ ಹರಿದ ರಕ್ತದ ಕಳಂಕವನ್ನು ಸುಳ್ಳುಗಳ ಬಟ್ಟೆಯಿಂದ ಉಜ್ಜಿ ತೆಗೆಯುವುದಕ್ಕೆ ಹೊರಟಿದ್ದಾರೆ. 200 ಜನರೂ ಇಲ್ಲದ ಪ್ರತಿಭಟನಾಕಾರರ ಗುಂಪನ್ನು, 4,000 ಕ್ಕೂ ಅಧಿಕ ಮಂದಿ ಎಂದು ಹೇಳುತ್ತಿರುವ ಆಯುಕ್ತರು, ಪ್ರತಿಭಟನಾಕಾರರು ಮಾರಕಾಯುಧಗಳನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಇದೇ ಕಾರಣಕ್ಕೆ ಪೊಲೀಸರು ದಾಳಿ ನಡೆಸಿದರು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಿಸಿ ಟಿವಿಗಳಲ್ಲಿ ಪೊಲೀಸರ ದೌರ್ಜನ್ಯಗಳು ದಾಖಲಾಗಿವೆಯೇ ಹೊರತು, ಮಾರಕಾಸ್ತ್ರಗಳಾಗಲಿ, ನಾಲ್ಕು ಸಾವಿರ ಪ್ರತಿಭಟನಾಕಾರರಾಗಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಇದೇ ಸಂದರ್ಭದಲ್ಲಿ ಘಟನೆಗಳನ್ನು ವರದಿ ಮಾಡಲು ಬಂದಿದ್ದ ಇತರ ರಾಜ್ಯಗಳ ಪತ್ರಕರ್ತರನ್ನೂ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಮಂಗಳೂರಿನ ಸ್ಥಿತಿಗತಿಗಳನ್ನು ವೀಕ್ಷಿಸಲು ಆಗಮಿಸಿದ್ದ ವಿರೋಧಪಕ್ಷದ ನಾಯಕರ ನಿಯೋಗಗಳನ್ನು ವಿಮಾನ ನಿಲ್ದಾಣದಲ್ಲೇ ತಡೆದು ಬಂಧಿಸಿದ್ದಾರೆ.

ಮಂಗಳೂರನ್ನು ‘ಕಾಶ್ಮೀರ’ವಾಗಿ ಪರಿವರ್ತಿಸಿರುವ ಪೊಲೀಸರು, ಒಳಗಿನ ವಿವರಗಳು ಹೊರ ದಾಟದಂತೆ ನೋಡಿಕೊಳ್ಳಲು ಹವಣಿಸುತ್ತಿದ್ದಾರೆ. ವಿರೋಧಪಕ್ಷದನಾಯಕರು ಮಂಗಳೂರಿಗೆ ಕಾಲಿಡಬಾರದು ಎನ್ನುವ ಪೊಲೀಸರು ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಡಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಕಲ್ಲಡ್ಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮನರಂಜನೆಯ ಭಾಗವಾಗಿ ಬಾಬರಿ ಮಸೀದಿ ಧ್ವಂಸವನ್ನು ಮರು ಸೃಷ್ಟಿಸಿದರು. ಸುಪ್ರೀಂಕೋರ್ಟ್ ಮಹಾಪರಾಧ ಎಂದು ಕರೆದ ಪ್ರಕರಣವನ್ನು ವಿದ್ಯಾರ್ಥಿಗಳು ಮಾಜಿ ಪೊಲೀಸ್ ಅಧಿಕಾರಿ ಕಿರಣ್‌ಬೇಡಿ, ಡಿಜಿಪಿ ಮೋಹನ್ ಪ್ರಸಾದ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಇವರೆಲ್ಲರ ಮುಂದೆಯೇ ಆಡಿ ತೋರಿಸಿದ್ದರು. ಅದರ ಮುಂದಿನ ಭಾಗವನ್ನು ಮಂಗಳೂರು ನಗರದಲ್ಲಿ ಪೊಲೀಸ್ ಆಯುಕ್ತರು ಮತ್ತು ಅವರ ಸಿಬ್ಬಂದಿ ಗುರುವಾರ ಮರುಸೃಷ್ಟಿಸಿ ಕಲ್ಲಡ್ಕದ ಆರೆಸ್ಸೆಸ್ ನಾಯಕರನ್ನು ಮನರಂಜಿಸಿದ್ದಾರೆ ಎಂದಷ್ಟೇ ಮಂಗಳೂರಿನ ಹಿಂಸಾಚಾರವನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಮಂಗಳೂರಿನಲ್ಲಿ ನಡೆದಿರುವ ಘಟನೆ, ಪೊಲೀಸ್ ಗೋಲಿಬಾರ್, ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿರುವ ದೃಶ್ಯಗಳೆಲ್ಲವೂ ತನಿಖೆಗೊಳಪಡಬೇಕಾಗಿದೆ. ನಿನ್ನೆಯ ದುರಂತಕ್ಕೆ ಕಾರಣರಾಗಿರುವ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯಾಗದೇ ಇದ್ದರೆ, ಕಾನೂನು ತನ್ನ ಘನತೆಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಮಂಗಳೂರಿಗೆ ಅಂಟಿದ ರಕ್ತದ ಕಳಂಕ ಶಾಶ್ವತವಾಗಿ ಉಳಿದು ಬಿಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X