ಮಂಗಳೂರು : ಕರ್ಫ್ಯೂ ಉಲ್ಲಂಘಿಸಿ ಸಿಪಿಐ ಪ್ರತಿಭಟನೆ
ಪೌರತ್ವ ತಿದ್ದುಪಡಿ ಕಾಯ್ದೆ, ಹಿಂಸಾಚಾರ ಘಟನೆಗೆ ಖಂಡನೆ

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರವನ್ನು ಖಂಡಿಸಿ ಸಿಪಿಐ ಮುಖಂಡರು ಕರ್ಫ್ಯೂ ಉಲ್ಲಂಘಿಸಿ ಮಂಗಳೂರು ಮಹಾನಗರ ಪಾಲಿಕೆಯ ಗಾಂಧಿ ಪ್ರತಿಮೆಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಯಡಿಯೂರಪ್ಪ ಗೋ ಬ್ಯಾಕ್, ಸಂವಿಧಾನ ವಿರೋಧಿಗಳಿಗೆ ದಿಕ್ಕಾರ, ಸೇವ್ ಇಂಡಿಯಾ, ಸೇವ್ ಡೆಮೊಕ್ರಸಿ, ಇಂಕಿಲಾಬ್ ಝಿಂದಾಬಾದ್ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಭಾ ಸದಸ್ಯ ಬಿನೊಯ್ ವಿಶ್ವಂ, ಜ್ಯೋತಿ ಕೆ, ಜ್ಯೋತಿ ಎ, ಜನಾರ್ದನ್ ಕೆ.ಎಸ್. ಸಂತೋಷ್ ಎಚ್.ಎಮ್, ಸಾತಿ ಸುಂದರೇಶ್ ಸೇರಿದಂತೆ ಆರು ಮಂದಿ ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


















