ತಕ್ಷಣ ಕರ್ಫ್ಯೂ ಹಿಂಪಡೆಯಬೇಕು : ಐವನ್ ಡಿಸೋಜ
ಮಂಗಳೂರು : ಪೂಜಾ ಕಾರ್ಯ ಹಾಗು ಕ್ರಿಸ್ಮಸ್ ಇರುವುದರಿಂದ ಕರ್ಫ್ಯೂವನ್ನು ತಕ್ಷಣ ಹಿಂಪಡೆಯಬೇಕು ಹಾಗು ಕರ್ಫ್ಯೂ ವಿಧಿಸುವಂತಹ ಯಾವುದೇ ಸನ್ನಿವೇಶ ಇಲ್ಲ ಎಂದು ಐವನ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಘಟನೆ ಸಂಬಂಧಿಸಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಗೋಲಿಬಾರ್ ಗೆ ಆದೇಶ ನೀಡಿಲ್ಲ ಎಂದು ತಿಳಿಸಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ವಿಪಕ್ಷ ನಾಯಕರು ಮಂಗಳೂರಿಗೆ ಬರುವುದನ್ನು ಪೊಲೀಸರು ತಡೆದಿದ್ದು ಖಂಡನೀಯವಾಗಿದ್ದು, ಪ್ರಜಾಪ್ರಭುತ್ವಕ್ಕೆ ತಕ್ಕೆ ತರುವ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ನಂತರ ಮಾತನಾಡಿ ಯು.ಟಿ. ಖಾದರ್ ಅವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿದೆ. ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ. ಎನ್ ಆರ್ ಸಿ ಮತ್ತು ಸಿಎಎ ಬಗ್ಗೆ ಸರಕಾರ ಮುಂಜಾಗೃತೆ ವಹಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ಜೆ.ಆರ್. ಲೋಬೊ, ವಿನಯ್ ರಾಜ್, ಹರೀಶ್ ಕುಮಾರ್. ಜಿಎ ಬಾವ, ಮುಹಮ್ಮದ್ ಮೋನು, ನೀರಜ್ ಪಾಲ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.