ಪೇಜಾವರ ಶ್ರೀ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಉಡುಪಿ: ಪ್ರಧಾನಿ ಮೋದಿ ಕರೆ ಮಾಡಿ ಪೇಜಾವರ ಶ್ರೀ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ ಎಂದು ಪೇಜಾವರ ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ಟಿ.ಪಿ. ಅನಂತ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ, ಉಮಾ ಭಾರತಿ ಪೇಜಾವರ ಶ್ರೀಯನ್ನು ಭೇಟಿ ಮಾಡಲಿದ್ದಾರೆ. ಕಾರ್ಪೋರೇಟ್ ಜಗತ್ತಿನ ಪ್ರಭಾವಿ ಮಹಿಳೆ ನೀರಾ ರಾಡಿಯಾ ಶುಕ್ರವಾರ ರಾತ್ರಿ ಮತ್ತು ಇಂದು ಮುಂಜಾನೆ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಣೆ ಮಾಡಿದರು. ನಂತರ ಮಾತನಾಡಿದ ಅವರು ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಇದೆ. ನಿನ್ನೆಗಿಂತ ಇವತ್ತು ಮತ್ತಷ್ಟು ಚೇತರಿಸಿಕೊಂಡಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜೈನ ಮಠ ಮೂಡುಬಿದಿರೆಯಲ್ಲಿ ಪೇಜಾವರ ಶ್ರೀ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ ಮಾಡಲಾಯಿತು. ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಉಡುಪಿ ಕೃಷ್ಣ ಮಠ, ಶ್ರೀ ಅನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನ ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ, ಮುಚ್ಲುಕೋಡು ಸುಬ್ರಹ್ಮಣ್ಯ , ಕರಂಬಳ್ಳಿ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತಿದೆ.
ಮಟ್ಟು ದೇವಳದಲ್ಲಿ ಶ್ರೀಗಳು ಗುಣಮುಖವಾಗಲೆಂದು ವಿದ್ವಾನ್ ಪ್ರವೀಣ ತಂತ್ರಿಗಳ ನೇತ್ರತ್ವದಲ್ಲಿ ಹಲವು ಪುರೋಹಿತರೋಂದಿಗೆ ಭಕ್ತರೆಲ್ಲರ ಸಮ್ಮುಖದಲ್ಲಿ ದನ್ಚಂತರಿ ಹೋಮ ಜರುಗಿತು ದೇವಳದ ಅದ್ಯಕ್ಷರಾದ ಲಕ್ಷೀನಾರಾಯಣ ರಾವ್, ಅರ್ಚಕರಾದ ಶ್ರೀಕಾಂತ ಅಚಾರ್ಯ, ಕ್ರಷ್ಣ ರಾವ್ , ಪ್ರವೀಣ ಸೇರಿಗಾರ್, ಮತ್ತಿತರರು ಉಪಸ್ತಿತರಿದ್ದರು.
ಕಾಪು ಲಕ್ಷ್ಮೀ ಜನಾರ್ದನ , ಮಟ್ಟು ವಿಷ್ಣುಮೂರ್ತಿ ದೇವಸ್ಥಾನಗಳಲ್ಲಿ ಪೇಜಾವರ ಶ್ರೀ ಅರೋಗ್ಯ ವೃದ್ದಿಗಾಗಿ ವಿಶೇಷ ಪೂಜೆ..







