ಕೇರಳದ ನವದಂಪತಿಯ ಮದುವೆ ಫೋಟೊಶೂಟ್ ನಲ್ಲಿ ಎನ್ ಆರ್ ಸಿ, ಸಿಎಎ ವಿರೋಧಿ ಪೋಸ್ಟರ್ !
ವಿಶಿಷ್ಟ ಫೋಟೊಶೂಟ್ ಬಗ್ಗೆ ಭಾರೀ ಮೆಚ್ಚುಗೆ

PHOTO: facebook.com/firstlookweddingphotography
ತಿರುವನಂತಪುರಂ: ಇಂದು ಹಸೆಮಣೆಯೇರಿದ ಕೇರಳದ ಯುವಜೋಡಿಯೊಂದು ತನ್ನ ವಿವಾಹಪೂರ್ವ ಫೊಟೋಶೂಟ್ ಅನ್ನು ವಿಶಿಷ್ಟವಾಗಿಸಿದೆ.
ಜಿಎಲ್ ಅರುಣ್ ಗೋಪಿ ಹಾಗೂ ಆಶಾ ಶೇಖರ್ ಅವರ ಫೋಟೋಶೂಟ್ ನಲ್ಲಿ ಅವರಿಬ್ಬರೂ ಕೈಯ್ಯಲ್ಲಿ ಪ್ರತ್ಯೇಕ ಭಿತ್ತಿ ಪತ್ರ ಹಿಡಿದಿದ್ದಾರೆ. ಗೋಪಿ ಕೈಯ್ಯಲ್ಲಿನ ಪೋಸ್ಟರ್ನಲ್ಲಿ 'ನೋ ಸಿಎಎ' ಎಂದು ಬರೆಯಲಾಗಿದ್ದರೆ ಆಶಾ ಕೈಯ್ಯಲ್ಲಿನ ಪೋಸ್ಟರ್ ನಲ್ಲಿ `ನೋ ಎನ್ಆರ್ಸಿ' ಎಂದು ಬರೆಯಲಾಗಿದೆ.
ದೇಶಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವಾಗ ಈ ಯುವಜೋಡಿಯ ವಿಶಿಷ್ಟ ಫೋಟೋಶೂಟ್ ಎಲ್ಲರ ಗಮನ ಸೆಳೆದಿದೆ.
Next Story





