ಬೈಕಂಪಾಡಿ : ಅಡ್ಕಾ ಉರೂಸ್ ಮುಂದೂಡಿಕೆ
ಮಂಗಳೂರು, ಡಿ.21: ನಗರದ ಹೊರವಲಯದ ಅಡ್ಕ ಬೈಕಂಪಾಡಿಯಲ್ಲಿ ಡಿ.23ರಿಂದ 28ರವರೆಗೆ ನಡೆಯಬೇಕಿದ್ದ ಮುಹಿಯುದ್ದೀನ್ ಜುಮ್ಮಾ ಮಸೀದಿ ಮುಸ್ಲಿಂ ಜಮಾಅತ್‌ನ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಹಝರತ್ ಶೇಕ್ ಮುಹಮ್ಮದ್ ವಲಿಯುಲ್ಲ (ಖಾ.ಸಿ.) ಉರೂಸ್‌ನ್ನು ಮುಂದೂಡಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಗೂ ಕರ್ಫ್ಯೂ ಜಾರಿ ಮಾಡಿರುವ ಕಾರಣ ಉರೂಸ್ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ.
ಉರೂಸ್ ಆಚರಣೆಯ ಮುಂದಿನ ದಿನಾಂಕವನ್ನು ಅತಿಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಸ್ಲಿಂ ಜಮಾಅತ್‌ನ ಕಾರ್ಯದರ್ಶಿ ಸೈದುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





