ಲಂಚ ಪಡೆಯುತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಪಾಲಿಕೆ ದ್ವಿತೀಯ ದರ್ಜೆ ಸಹಾಯಕ
ಮೈಸೂರು, ಡಿ.21: ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕನೋರ್ವ ಮೂರು ಸಾವಿರ ರೂ.ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಕೆ.ಆರ್.ಕ್ಷೇತ್ರದ ಆಶ್ರಯ ವಸತಿ ಯೋಜನೆ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಲಿಕೆಯ ದ್ವಿತೀಯ ದರ್ಜೆಯ ಸಹಾಯಕ ಮಂಜುನಾಥ್ ಎಂಬಾತ ಕೆಂಪಮ್ಮ ಎಂಬವರಿಗೆ ಆಶ್ರಯ ಮನೆಯ ಖುಲಾಸೆ ಪತ್ರ ಕೊಡಿಸುವುದಕ್ಕೆ 15 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ವಿಷಯವನ್ನು ಅವರು ಎಸಿಬಿ ಗಮನಕ್ಕೆ ತಂದಿದ್ದರು. ಶುಕ್ರವಾರ ಮೂರು ಸಾವಿರ ರೂ.ಲಂಚ ಪಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.
ಎಸಿಬಿ ಮೈಸೂರು ಎಸ್ಪಿ ರಶ್ಮಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಡಿವೈ ಎಸ್ಪಿ ಪರಶುರಾಮಪ್ಪ, ಇನ್ಸ್ ಪೆಕ್ಟರ್ ಗಳಾದ ಅಬ್ದುಲ್ ಕರೀಂ,ರಾವತ್ ಕರ್, ಕೆ.ಎಸ್.ನಿರಂಜನ್, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Next Story





