ಮಂಗಳೂರಿನಲ್ಲಿ ಹಿಂಸಾಚಾರ ಪ್ರಕರಣ: ಎಸ್ಕೆಎಸ್ಸೆಸ್ಸೆಫ್ ಯಿಂದ ಮುಖ್ಯಮಂತ್ರಿಗೆ ತನಿಖೆಗೆ ಮನವಿ

ಮಂಗಳೂರು : ಇಂದು ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ರಾಜ್ಯ ತರಬೇತುದಾರ ಇಕ್ಬಾಲ್ ಬಾಳಿಲ ದ.ಕ. ಜಿಲ್ಲೆಯಲ್ಲಿ ನಡೆದ ಘಟನೆಯ ತನಿಖೆ ಶೀಘ್ರದಲ್ಲೆ ನಡೆಸುವಂತೆ ಗೋಲಿಬಾರ್ ಮೃತ ಯುವಕರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಎನ್. ಆರ್ ಸಿ ವಿರುದ್ಧ ಪ್ರತಿಭಟಿಸುವುದು ಪ್ರಜೆಯ ಹಕ್ಕು ಅದರ ಅನುಮತಿ ನಿರಾಕರಣೆ ವಿಶಾದನೀಯ. ಪ್ರತಿಭಟಿಸಲು ಅನುಮತಿ ನೀಡುವಂತೆಯೂ, ಇಲ್ಲದಿದ್ದಲ್ಲಿ ಇನ್ನಷ್ಟು ಗೊಂದಲಕ್ಕೆ ಕಾರಣವಾಗಬಹುದೆಂದು ತಿಳಿಸಲಾಗಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ನೀಡುವುದಾಗಿಯೂ ತನಿಖೆಯ ಬಗ್ಗೆ ತಿಳಿಸಿರುತ್ತಾರೆ. ಸರ್ಕ್ಯೂಟ್ ಹೌಸ್ ಬಿಗಿ ಭದ್ರತೆ ಇದ್ದುದರಿಂದ ಸಂಘಟನೆ ಪರವಾಗಿ ಇಕ್ಬಾಲ್ ಬಾಳಿಲ ಹಾಗೂ ಹನೀಫ್ ಸಾಹೇಬ್ ಪಾಜಪಳ್ಳ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಹಾಗೂ ವರ್ಕಿಂಗ್ ಕಾರ್ಯದರ್ಶಿ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ
ಸಹಕರಿಸಿದ್ದಾರೆ.
Next Story





