ಮಂಗಳೂರು: ಪೋಲಿಸ್ ಗೋಲಿಬಾರ್ ಗೆ ಎಸ್ಸೆಸ್ಸೆಫ್ ಖಂಡನೆ
ಮಂಗಳೂರು: ಮಂಗಳೂರಿನಲ್ಲಿ ಇಬ್ಬರು ಅಮಾಯಕರನ್ನು ಗುಂಡಿಕ್ಕಿ ಕೊಂದಿರುವ ಪೋಲಿಸ್ ಇಲಾಖೆಯ ಮೇಲೆ ಜನಸಾಮಾನ್ಯರಿಗಿದ್ದ ವಿಶ್ವಾಸ ಕುಸಿದಿದೆ ಎಂದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್, ತಪ್ಪಿತಸ್ಥ ಪೋಲಿಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅನಗತ್ಯವಾಗಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ನಾಗರಿಕರಲ್ಲಿ ಗೊಂದಲ ಹುಟ್ಟಿಸಿದ್ದಲ್ಲದೇ ಗೋಲಿಬಾರ್ ಬಳಿಕ ಸಾವಿರಾರು ಮಂದಿ ಪೋಲಿಸ್ ಸ್ಟೇಷನ್ ಗೆ ಬೆಂಕಿ ಹಚ್ಚಲು ಯತ್ನಿಸಿದ್ದರೆಂದೂ ಸಾರ್ವಜನಿಕರಿಗೆ ಸುಳ್ಳು ಸಂದೇಶ ಹರಡಿರುವ ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





