ಪರ್ತಿಪ್ಪಾಡಿ: ಅಲ್ ಬಿರ್ರ್ ವಾರ್ಷಿಕ ಕ್ರೀಡಾಕೂಟ
![ಪರ್ತಿಪ್ಪಾಡಿ: ಅಲ್ ಬಿರ್ರ್ ವಾರ್ಷಿಕ ಕ್ರೀಡಾಕೂಟ ಪರ್ತಿಪ್ಪಾಡಿ: ಅಲ್ ಬಿರ್ರ್ ವಾರ್ಷಿಕ ಕ್ರೀಡಾಕೂಟ](https://www.varthabharati.in/sites/default/files/images/articles/2019/12/22/224749-1577038175.jpg)
ವಿಟ್ಲ, ಡಿ. 22: ವಿಟ್ಲ ಸಮೀಪದ ಪರ್ತಿಪ್ಪಾಡಿ ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಕ್ರೀಡಾಕೂಟವನ್ನು ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪರ್ತಿಪ್ಪಾಡಿ ಜುಮಾ ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಅಲಿ ಪರ್ತಿಪ್ಪಾಡಿ, ಶೋಹೆಬು ಮೇಗಿನಪೇಟೆ, ಹಾರೀಸ್ ಕುಡ್ತಮುಗೇರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ರನ್ನಿಂಗ್ ರೇಸ್, ತ್ರೋಬಾಲ್, ಸ್ಟೇಡಿಂಗ್ ಜಂಪ್ ಹಾಗೂ ಗೇಮ್ಸ್ ಸೇರಿದಂತೆ ಕಾರ್ಯಕ್ರಮಗಳು ನಡೆಯಿತು.
ವಿದ್ಯಾರ್ಥಿಗಳಾದ ಫಾತಿಮಾ ಹಾಫೀಲಾ ಹಾಗೂ ಮುಹಮ್ಮದ್ ಅಬೂಬಕರ್ ಹಮೀದ್ ಕಿರಾಅತ್ ಪಠಿಸಿದರು. ಅಲಿಶಾಬಾ ಮರೀಯಮ್ ದುಆ ನೆರವೇರಿಸಿದರು. ಶಾಝಿನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಝೂಲ್ಫಾ ಮತ್ತು ಮರೀಯಮ್ ಸಫಾ, ಮುನಾಝ್ ಪಥ ಸಂಚಲನದ ನೇತೃತ್ವ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಆಯಿಷತ್ತುಲ್ ಬುಶ್ರಾ ಸ್ವಾಗತಿಸಿದರು. ಶಿಕ್ಷಕಿ ರಂಶೀನಾ ವಂದಿಸಿದರು.
Next Story