Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೈಕ್ಲಿಂಗ್ ನಿಂದಾಗುವ ಆರೋಗ್ಯ ಲಾಭಗಳು

ಸೈಕ್ಲಿಂಗ್ ನಿಂದಾಗುವ ಆರೋಗ್ಯ ಲಾಭಗಳು

ಆರೋಗ್ಯ

ವಾರ್ತಾಭಾರತಿವಾರ್ತಾಭಾರತಿ23 Dec 2019 10:48 AM IST
share
ಸೈಕ್ಲಿಂಗ್ ನಿಂದಾಗುವ ಆರೋಗ್ಯ ಲಾಭಗಳು

ಮನೆಯಲ್ಲಿ ವ್ಯಾಯಾಮ ಮಾಡಲು ಅಥವಾ ಜಿಮ್‌ಗೆ ಹೋಗಲು ಆಗುತ್ತಿಲ್ಲ ಎಂಬ ಚಿಂತೆಯೇ? ನಿಮ್ಮ ಕಾರ್ಯಭಾರ ನಿಮ್ಮ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆಯೇ? ಇದು ನೀವು ನಿಮ್ಮ ದಿನದ 24 ಗಂಟೆಗಳನ್ನು ಹೇಗೆ ನಿಭಾಯಿಸುತ್ತೀರಿ ಮತ್ತು ಸಮಯದ ಬಳಕೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದನ್ನು ಅವಲಂಬಿಸಿದೆ. ಇಲ್ಲೊಂದು ಪುಟ್ಟ ಸಲಹೆಯಿದೆ. ಇದು ನಿಮಗೆ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ನೆರವಾಗುವುದು ಮಾತ್ರವಲ್ಲ,ನಿಮಗೆ ವಯಸ್ಸಾಗುವುದನ್ನೂ ತಡೆಯಬಹುದು. ಏನಿದು ಎಂಬ ಅಚ್ಚರಿಯೇ? ಅದುವೇ ಸೈಕ್ಲಿಂಗ್,ನಾವೆಲ್ಲ ಚಿಕ್ಕಂದಿನಲ್ಲಿ ತುಂಬ ಇಷ್ಟ ಪಡುತ್ತಿದ್ದ ಆದರೆ ದೊಡ್ಡವರಾದಂತೆ ಮರೆತುಬಿಟ್ಟಿರುವ ಸೈಕಲ್ ಸವಾರಿ. ಸೈಕಲ್ ಸವಾರಿ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ದಿನಕ್ಕೆ ಕೇವಲ 30 ನಿಮಿಷಗಳ ಸೈಕಲ್ ಸವಾರಿ ಬಾಲ್ಯದ ನೆನಪುಗಳನ್ನು ಮರುಕಳಿಸುವುದು ಮಾತ್ರವಲ್ಲ,ನೀವು ಒಂದು ಗಂಟೆ ಜಿಮ್‌ನಲ್ಲಿ ಬೆವರಿಳಿಸುವುದಕ್ಕಿಂತ ಹೆಚ್ಚಿನ ಫಲಗಳನ್ನು ನೀಡುತ್ತದೆ. ಹೀಗಾಗಿ ದಿನವೂ ಸೈಕಲ್ ಸವಾರಿ ಮಾಡಿ ಯುವಕರಾಗಿಯೇ ಉಳಿಯಿರಿ.

► ಸೈಕ್ಲಿಂಗ್  ಮತ್ತು ನಿಧಾನವಾಗಿ ವಯಸ್ಸಾಗುವಿಕೆ

ನಿಮಗೆ ವಯಸ್ಸಾಗುತ್ತಿದೆ ಎನ್ನುವುದರ ಮೊದಲ ಸಂಕೇತವನ್ನು ನಿಮ್ಮ ಚರ್ಮವು ನೀಡುತ್ತದೆ, ನಂತರ ನಿಮ್ಮ ಮೂಳೆಗಳು ಮತ್ತು ಇತರ ಅಂಗಾಂಗಗಳು ಮತ್ತು ಶ್ರಮಸಾಧ್ಯತೆಯ ಮೇಲೆ ಅದು ತನ್ನ ಪರಿಣಾಮವನ್ನು ಬೀರುತ್ತದೆ. ಆದರೆ ಸೈಕಲ್ ಸವಾರಿ ನಿಮಗೆ ಬೇಗನೇ ವಯಸ್ಸಾಗುವುದಕ್ಕೆ ಬ್ರೇಕ್ ಹಾಕುತ್ತದೆ. ಅದು ನಿಮ್ಮ ಇಡೀ ಶರೀರಕ್ಕೆ ವ್ಯಾಯಾಮ ನೀಡುವ ಜೊತೆಗೆ ಮೂಳೆಗಳನ್ನು ಸದೃಢಗೊಳಿಸುತ್ತದೆ ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಸೈಕಲ್ ಸವಾರಿ ಮಾಡುವಾಗ ನೀವು ವೇಗವಾಗಿ ಉಸಿರಾಡುತ್ತೀರಿ,ಇದರಿಂದಾಗಿ ನಿಮ್ಮ ಚರ್ಮವು ವಿಫುಲ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ ಮತ್ತು ದೀರ್ಘ ಸಮಯದವರೆಗೆ ತನ್ನ ಯೌವನವನ್ನು ಉಳಿಸಿಕೊಳ್ಳುತ್ತದೆ.

 ► ಹೃದ್ರೋಗಗಳನ್ನು ತಡೆಯುತ್ತದೆ

 ಸೈಕಲ್ ಸವಾರಿಯು ಎರೋಬಿಕ್ ವ್ಯಾಯಾಮವಾಗಿದ್ದು, ಹಲವಾರು ಲಾಭಗಳನ್ನು ನೀಡುತ್ತದೆ. ಅದು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದು ಮಿದುಳಿನಲ್ಲಿ ಸೆರೊಟೋನಿನ್,ಡೋಪಮೈನ್ ಮತ್ತು ಫಿನೈಲ್‌ಇಥೈಲಮೈನ್‌ನಂತಹ ರಾಸಾಯನಿಕಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇವು ನೀವು ಚಿಂತೆಯನ್ನು ಮರೆತು ಸದಾಕಾಲ ಸಂತಸದಿಂದಿರಲು ನೆರವಾಗುತ್ತವೆ.

► ಬೊಜ್ಜಿನ ವಿರುದ್ಧ ಹೋರಾಡುತ್ತದೆ

 ಇಂದು ಜನರಲ್ಲಿ ಬೊಜ್ಜಿನ ಸಮಸ್ಯೆ ತೀವ್ರವಾಗಿ ಬೆಳೆಯುತ್ತಿದೆ ಮತ್ತು ಬೊಜ್ಜು ಮಧುಮೇಹ, ಹೃದ್ರೋಗ ಹಾಗೂ ಯಕೃತ್ತು ಕಾಯಿಲೆಗಳಂತಹ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಹೀಗಾಗಿ ದೀರ್ಘಾಯುಷ್ಯವನ್ನು ಹೊಂದಲು ಬೊಜ್ಜಿನಿಂದ ದೂರವುಳಿಯುವುದು ತುಂಬ ಮುಖ್ಯವಾಗಿದೆ. ಪ್ರತಿ ದಿನ 30 ನಿಮಿಷಗಳ ಕಾಲ ಸೈಕಲ್ ಸವಾರಿ ಮಾಡುವುದರಿಂದ ಬೊಜ್ಜಿನಿಂದ ದೂರವುಳಿಯಬಹುದಾಗಿದೆ. ಸೈಕಲ್ ಸವಾರಿಯು ನಿಮ್ಮ ಇಡೀ ಶರೀರಕ್ಕೆ ವ್ಯಾಯಾಮವನ್ನು ನೀಡುತ್ತದೆ ಮತ್ತು ಬಹಳಷ್ಟು ಕ್ಯಾಲೊರಿಗಳನ್ನು ಕರಗಿಸುತ್ತದೆ. ಹೀಗಾಗಿ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಮತ್ತು ಆರೋಗ್ಯಕರವಾಗಿರಲು ಸೈಕಲ್ ಸವಾರಿ ಸುಲಭ ವಿಧಾನವಾಗಿದೆ.

► ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹ ರೋಗಿಗಳು ನಿಯಮಿತವಾಗಿ ದೂರ ಅಂತರದ ಸೈಕಲ್ ಸವಾರಿಯನ್ನು ಮಾಡುತ್ತಿದ್ದರೆ ಅವರು ಅದಕ್ಕೆ ಮುನ್ನ ಮತ್ತು ನಂತರ ತಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಕೊಳ್ಳಬೇಕು. ಸೈಕಲ್ ಸವಾರಿ ಮಧುಮೇಹಿಗಳಿಗೆ ತುಂಬ ಆರಾಮವನ್ನು ನೀಡುತ್ತದೆ. ಆದರೆ ಸೈಕಲ್ ಸವಾರಿಗೆ ಮುನ್ನ ಯಥೇಚ್ಛ ನೀರನ್ನು ಕುಡಿಯುವುದನ್ನು ಮಧುಮೇಹಿಗಳು ಮರೆಯಬಾರದು. ಟೈಪ್-1 ಮಧುಮೇಹ ರೋಗಿಗಳು ಒಂದು ಗಂಟೆಗೂ ಹೆಚ್ಚು ಕಾಲ ಸೈಕಲ್ ಸವಾರಿಯನ್ನು ಮಾಡುವುದಿದ್ದರೆ ಸ್ವಲ್ಪ ಕಾರ್ಬೊಹೈಡ್ರೇಟ್ ಸಮೃದ್ಧ ಆಹಾರವನ್ನೂ ಸೇವಿಸಬೇಕು.

► ಒತ್ತಡವನ್ನು ತಗ್ಗಿಸುತ್ತದೆ

ಸಾಧಾರಣ ಮಟ್ಟದ ಜೀವನಶೈಲಿ,ಕಲುಷಿತ ಆಹಾರ ಮತ್ತು ಬಿಡುವಿಲ್ಲದ ದಿನಚರಿ ಇವುಗಳಿಂದಾಗಿ ಇಂದು ಜನರಲ್ಲಿ ಒತ್ತಡ ಮತ್ತು ಖಿನ್ನತೆ ಅತ್ಯಂತ ಸಾಮಾನ್ಯವಾಗಿಬಿಟ್ಟಿವೆ. ಒತ್ತಡವು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೈಕಲ್ ಸವಾರಿಯು ಒತ್ತಡಕ್ಕೆ ಗುರಿಯಾಗುವ ಅಪಾಯವನ್ನು ತೀವ್ರವಾಗಿ ತಗ್ಗಿಸುತ್ತದೆ.

► ಮೂಳೆಗಳನ್ನು ಸದೃಢಗೊಳಿಸುತ್ತದೆ

ವೃದ್ಧಾಪ್ಯದ ಹಲವಾರು ಸಮಸ್ಯೆಗಳಿಗೆ ಅಸ್ಥಿರಂಧ್ರತೆಯು ಕಾರಣವಾಗಿದೆ. ಮೂಳೆಗಳು ದುರ್ಬಲಗೊಳ್ಳುವುದರಿಂದ ಶರೀರವು ನೋವಿನಿಂದ ಕೂಡಿರುತ್ತದೆ ಮತ್ತು ಕುಳಿತರೆ ಸರಾಗವಾಗಿ ಏಳಲೂ ಸಾಧ್ಯವಾಗುವುದಿಲ್ಲ. ಸೈಕಲ್ ಸವಾರಿ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಪಾದಗಳಿಗೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ. ಸಂದುನೋವುಗಳಿಗೆ ವಿದಾಯ ಹೇಳುತ್ತದೆ. ಓಟಕ್ಕೆ ಹೋಲಿಸಿದರೆ ಸೈಕಲ್ ಸವಾರಿಯು ನಿಮ್ಮ ಮಂಡಿಗಳ ಮೇಲೆ ತುಂಬ ಕಡಿಮೆ ಒತ್ತಡವನ್ನುಂಟು ಮಾಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X