ಹಡಿಲು ಬಿಟ್ಟ ಕೃಷಿಭೂಮಿ ವಾಪಾಸ್ಸು ಪಡೆಯಲು ನೋಟೀಸ್ ಜಾರಿ
‘ಬದುಕು ಬೆಳಕು’ ಕಾರ್ಯಾಗಾರ ಉದ್ಘಾಟಿಸಿದ ಡಿಸಿ ಜಗದೀಶ್

ಮಣಿಪಾಲ, ಡಿ.23: ಪಾಳು ಬಿಟ್ಟಿರುವ ಕೃಷಿ ಭೂಮಿಗಳನ್ನು ಸರಕಾರಕ್ಕೆ ವಾಪಾಸ್ಸು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಉಡುಪಿ ಜಿಲ್ಲೆ ಯಲ್ಲಿ ಕೃಷಿ ಮಾಡದೆ ದೊಡ್ಡ ಮಟ್ಟದಲ್ಲಿ ಹಡಿಲು ಬಿಟ್ಟಿರುವ ಕೃಷಿ ಭೂಮಿಗಳನ್ನು ಸರಕಾರ ವಾಪಾಸ್ಸು ಪಡೆದುಕೊಳ್ಳುವ ಬಗ್ಗೆ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಸೆಲ್ಕೊ ಫೌಂಡೇಶನ್, ಉಡುಪಿ ಜಿಲ್ಲಾಡಳಿತ, ಸೆಲ್ಕೋ ಸೋಲಾರ್ ಲೈಟ್ಸ್ ಪ್ರೈವೆಟ್ ಲಿಮಿಟೆಡ್, ಭಾರತೀಯ ವಿಕಾಸ ಟ್ರಸ್ಟ್, ಮಂಗಳೂರು ಜನಶಿಕ್ಷಣ ಟ್ರಸ್ಟ್, ಕುಂದಾಪುರ ನಮ್ಮ ಭೂಮಿ ಹಾಗೂ ಕಾರ್ಕಳ ಕದಿಕೆ ಟ್ರಸ್ಟ್‌ಗಳ ಸಹ ಯೋಗದೊಂದಿಗೆ ಮಣಿಪಾಲ ಬಿವಿಟಿ ಕ್ಯಾಂಪಸ್‌ನಲ್ಲಿ ಸೋಮವಾರ ಆಯೋ ಜಿಸಲಾದ ಸುಸ್ಥಿರ ಇಂಧನದ ಮೂಲಕ ಜೀವನಾಧಾರಿತ ಚಟುವಟಿಕೆ ಗಳು, ಕೃಷಿ ಹಾಗೂ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆಗಳ ಪುನಶ್ಟೇತನ ಕಾರ್ಯಾ ಗಾರ ‘ಬದುಕು ಬೆಳಕು’ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೃಷಿ ಭೂಮಿಯಲ್ಲಿ ಕೃಷಿ ಮಾಡದೆ ಪಾಳು ಬಿಟ್ಟ ಪರಿಣಾಮ ಇಂದು ಅಂತ ರ್ಜಲ ದಿನೇ ದಿನೇ ಕುಸಿಯುತ್ತಿದೆ. ಇದರಿಂದ ಕುಡಿಯುವ ನೀರಿಗಾಗಿ ಬವಣೆ ಪಡುವಂತಾಗಿದೆ. ಕೃಷಿ ಮಾಡಲು ಕೊಟ್ಟಿರುವ ಭೂಮಿಯನ್ನು ಪಾಳು ಬಿಟ್ಟಿ ರುವುದು ಸರಿಯಲ್ಲ. ಕೃಷಿ ಭೂಮಿಯಲ್ಲಿ ಯಾಕೆ ಉಳುಮೆ ಮಾಡುತ್ತಿಲ್ಲ ಮತ್ತು ಯಾಕೆ ಆ ಭೂಮಿಯನ್ನು ಸರಕಾರ ವಾಪಾಸ್ಸು ಪಡೆಯಬಾರದು ಎಂಬುದಾಗಿ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದರು.
ಗ್ರಾಮೀಣ ಪ್ರದೇಶವನ್ನು ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರು ವುದು ಮತ್ತು ಖಾದಿ ಗ್ರಾಮೋದ್ಯೋಗ ಮುಚ್ಚುಗಡೆ ಕಾಣುತ್ತಿರುವುದು. ಇಂದಿನ ಪೈಪೋಟಿ ಯುಗ ದಲ್ಲಿ ಗುಡಿ ಕೈಗಾರಿಕೆಗಳು ಕಣ್ಣು ಮುಚ್ಚುತ್ತಿವೆ. ಗಾಂಧೀಜಿಯ ಕನಸನ್ನು ನಾವು ಮೂಲೆಗುಂಪು ಮಾಡಿದ ಪರಿಣಾಮ ಗುಡಿಕೈಗಾರಿಕೆಗಳನ್ನು ಹಂತಹಂತವಾಗಿ ಮುಚ್ಚುತ್ತಿದ್ದೇವೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಟಿ. ಅಶೋಕ್ ಪೈ ವಹಿಸಿದ್ದರು. ಟ್ರಸ್ಟಿ ವಿಮಲಾ ಕಾಮತ್, ಸೆಲ್ಕೋ ಮಹಾ ಪ್ರಬಂಧಕ ಜಗದೀಶ್ ಪೈ ಉಪಸ್ಥಿತರಿದ್ದರು. ಸೆಲ್ಕೋ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮೋಹನ್ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಮಹಾಪ್ರಬಂಧಕ ಗುರು ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು.
ಈ ಕಾರ್ಯಾಗಾರದಲ್ಲಿ ಸೆಲ್ಕೊ ಅವರ ವಿವಿಧ ಸೋಲಾರ್ ಪರಿಕರಗಳನ್ನು ಪ್ರದರ್ಶಿಸಲಾಗಿತ್ತು. ಸೋಲಾರ್ ಕುಂಬಾರಿಕೆ ಯಂತ್ರ, ಕಬ್ಬಿನ ಹಾಲು ಮಾಡುವ ಯಂತ್ರ, ಬ್ಲೋವರ್ ಯಂತ್ರ, ಟೈಲರಿಂಗ್ ಯಂತ್ರಗಳ ಪ್ರಾತ್ಯಕ್ಷಿಕೆ ಯನ್ನು ತೋರಿಸಲಾ ಯಿತು. ಅದೇ ರೀತಿ ಸೋಲಾರ್ ಝೆರಾಕ್ಸ್ ಮೆಶಿನ್, ಹಿಟ್ಟಿನ ಗಿರಣಿ, ಮುದ್ರಣ ಯಂತ್ರ, ಹಗ್ಗ ತಯಾರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರೊಟ್ಟಿ ಮಾಡುವ ಯಂತ್ರಗಳು ಗಮನ ಸೆಳೆದವು.








