ಡಿ.24: ಗೋಲಿಬಾರ್ ಸಂತ್ರಸ್ತರ ಮನೆಗೆ ಸಿಪಿಎಂ ನಿಯೋಗ ಭೇಟಿ
ಮಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧದಿಂದ ಗುರುವಾರ ನಗರದಲ್ಲಿ ನಡೆದ ಪ್ರತಿಭಟನೆಯ ವೇಳೆಗೆ ಪೊಲೀಸ್ ಗೋಲಿಬಾರ್‌ನಿಂದ ಮೃತರಾದ ಮಂಗಳೂರಿನ ಇಬ್ಬರ ಮನೆಗೆ ಹಾಗೂ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಭೇಟಿಯಾಗಲು ಸಿಪಿಎಂ ಪಕ್ಷದ ಸಂಸದರು ಹಾಗೂ ಶಾಸಕರು ಡಿ.24ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ.
ಸಿಪಿಎಂ ನಾಯಕ ಹಾಗೂ ಮಾಜಿ ಸಂಸದ ಪಿ.ಕರುಣಾಕರನ್, ಹಾಲಿ ಲೋಕಸಭಾ ಸದಸ್ಯ ಕೆ.ಕೆ.ರಾಗೇಶ್, ರಾಜ್ಯ ಸಭಾ ಸದಸ್ಯರಾದ ಎರಮರಂ ಕರೀಂ ಹಾಗೂ ಸೋಮಪ್ರಸಾದ್, ಕಾಸರಗೋಡಿನ ಮಾಜಿ ಶಾಸಕ ಸಿ.ಎಚ್.ಕುಂಞಂಬು, ಹಾಲಿ ಶಾಸಕರಾದ ಕೆ.ಕುಂಞಿರಾಮನ್, ಎಂ.ರಾಜಗೋಪಾಲ್, ಕೇರಳ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಮಂಜೇಶ್ವರ ಸಂಸದರ ನಿಯೋಗದಲ್ಲಿ ಮಂಗಳೂರಿಗೆ ಭೇಟಿ ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





