ಡಿ.25ರಂದು ಮುಖ್ಯಮಂತ್ರಿ ದ.ಕ. ಜಿಲ್ಲಾ ಪ್ರವಾಸ
ಮಂಗಳೂರು, ಡಿ.23: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಡಿ.25ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.25ರಂದು ಬೆಳಗ್ಗೆ 10:15ಕ್ಕೆ ಮಂಗಳೂರು ವಿಮಾನಕ್ಕೆ ಆಗಮಿಸಿ, 11:45ಕ್ಕೆ ಮೂಡುಬಿದಿರೆ ತಾಲೂಕಿನ ಒಂಟಿಕಟ್ಟೆಯಲ್ಲಿ ನಡೆಯುವ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಆಯೋಜಿಸಿರುವ 17ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ್ಯ ಕಂಬಳ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಜತೆಗೆ, ವೀರರಾಣಿ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಉಡುಪಿ ಜಿಲ್ಲೆಗೆ ತೆರಳುವ ಮುಖ್ಯಮಂತ್ರಿ, ಸಂಜೆ 6:15ಕ್ಕೆ ಬಂಗ್ರ ಕೂಳೂರು, ಗೋಲ್ಡ್ ಫಿಂಚ್ ಸಿಟಿ ಮಂಗಳೂರಿನಲ್ಲಿ ನಡೆಯುವ ಪ್ರಕಾಶಾಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7:30ಕ್ಕೆ ವಿಮಾನದ ಮೂಲಕ ಕೇಂದ್ರಸ್ಥಾನ ಬೆಂಗಳೂರಿಗೆ ತೆರಳಲಿದ್ದಾರೆ.
Next Story





