ಪ್ರಗತಿಪರ ಕೃಷಿಕ ಕೆ. ಗಣೇಶ್ ರೈ ನಿಧನ

ಮೂಡುಬಿದಿರೆ, ಡಿ. 23: ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ಪ್ರಗತಿ ಪರ ಕೃಷಿಕ ಕೆ. ಗಣೇಶ್ ರೈ (65) ಅವರು ಸೋಮವಾರ ನಿಧನ ಹೊಂದಿದರು. ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ.
ದಿ. ವಿದ್ವಾನ್ ಕೆ. ಕಾಂತ ರೈ ಅವರ ಪುತ್ರ ಗಣೇಶ್ ರೈ ಅವರು ಮಹಾವೀರ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗ ವಿದ್ಯಾರ್ಥಿ ನಾಯಕರಾಗಿದ್ದರು. ತಂದೆಯೊಂದಿಗೆ ಕರಿಂಜೆಯಲ್ಲಿ ಕೃಷಿ ಕಾರ್ಯದಲ್ಲಿ ಪರಿಣತಿ ಹೊಂದಿದ ಅವರು ಬೆಳ್ತಂಗಡಿ ತಾಲೂಕಿನ ಹೊಸಂಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತೆಂಗು, ಅಡಿಕೆ, ಕರಿಮೆಣಸು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹೊಸಂಗಡಿ ಹಾಗೂ ಪರಿಸರದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಕ್ರೀಡಾರಂಗಗಳಲ್ಲಿ ಸಕ್ರಿಯರಾಗಿದ್ದು ಸಾಕಷ್ಟು ಮಂದಿಗೆ ಪ್ರೋತ್ಸಾಹ ನೀಡುತ್ತಿದ್ದರು.
Next Story





