ಭಾರತ-ಅಮೆರಿಕ ಬಾಂಧವ್ಯ ಭದ್ರಗೊಳಿಸಲು ಹೌಸ್ ನಲ್ಲಿ ಮಸೂದೆ ಮಂಡನೆ

ವಾಶಿಂಗ್ಟನ್, ಡಿ. 23: ಶಿಕ್ಷಣ, ಸಂಘರ್ಷ ನಿವಾರಣೆ ಮತ್ತು ಅಭಿವೃದ್ಧಿ ಎಂಬ ಸಮಾನ ಮೌಲ್ಯಗಳನ್ನು ಬಲಪಡಿಸುವ ಮೂಲಕ ಭಾರತ ಮತ್ತು ಅಮೆರಿಕಗಳ ನಡುವಿನ ಭಾಗೀದಾರಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿರುವ ನೂತನ ಮಸೂದೆಯೊಂದನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಲಾಗಿದೆ.
ಜಾರ್ಜಿಯದ ಡೆಮಾಕ್ರಟಿಕ್ ಸಂಸದ ಜಾನ್ ಲೂಯಿಸ್ ಈ ಮಸೂದೆಯನ್ನು ಡಿಸೆಂಬರ್ 19ರಂದು ಮಂಡಿಸಿದ್ದಾರೆ.
ಪ್ರಸಕ್ತ ಆರು ಸಂಸದರು ಮಸೂದೆಯನ್ನು ಸಹಪ್ರಾಯೋಜಿಸಿದ್ದಾರೆ. ಅವರೆಲ್ಲರೂ ಡೆಮಾಕ್ರಟಿಕ್ ಪಕ್ಷದವರು. ಅವರ ಪೈಕಿ ಮೂವರು ವಾಶಿಂಗ್ಟನ್ ರಾಜ್ಯದ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಭಾರತೀಯ ಅಮೆರಿಕನ್ ಸಂಸದರು.
ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನದ ಸಂದರ್ಭದಲ್ಲಿ, ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್‌ರ ನಿಷ್ಠಾವಂತ ಬೆಂಬಲಿಗರಾಗಿರುವ ಲೂಯಿಸ್ ಈ ಮಸೂದೆಯನ್ನು ಮಂಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
Next Story





