ಗುಂಡು ಹಾರಾಟ ಬಲಿಪಶುಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲೇ ಗುಂಡು ಹಾರಾಟ: 13 ಮಂದಿಗೆ ಗಾಯ

ಶಿಕಾಗೊ (ಅಮೆರಿಕ), ಡಿ. 23: ಇತ್ತೀಚೆಗೆ ನಡೆದ ಗುಂಡು ಹಾರಾಟ ಪ್ರಕರಣವೊಂದರ ಬಲಿಪಶುಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಅಮೆರಿಕದ ಶಿಕಾಗೊ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲೇ ಗುಂಡು ಹಾರಾಟ ನಡೆದು 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರವಿವಾರ ಅಪರಾಹ್ನ ನಡೆದ ಘಟನೆಯಲ್ಲಿ ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಗುಂಡು ಹಾರಿಸಿದವರ ಪೈಕಿ 25 ವರ್ಷದ ಓರ್ವ ಯುವಕನೂ ಘಟನೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
‘‘ಎಪ್ರಿಲ್‌ನಲ್ಲಿ ನಡೆದ ಗುಂಡು ಹಾರಾಟ ಪ್ರಕರಣವೊಂದರಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಈ ಸಭೆಯನ್ನು ಆಯೋಜಿಸಲಾಗಿತ್ತು’’ ಎಂದು ಶಿಕಾಗೊ ಪೊಲೀಸ್ ಮುಖ್ಯಸ್ಥ ಫ್ರೆಡ್ ವಾಲರ್ ತಿಳಿಸಿದರು.
Next Story





