ಸುಳ್ಯ: ಮುಸ್ಲಿಮ್ ಹಿತರಕ್ಷಣಾ ವೇದಿಕೆಯ ಪ್ರತಿಭಟನಾ ಸಭೆ ಮುಂದೂಡಿಕೆ
ಸುಳ್ಯ, ಡಿ. 23: ಮುಸ್ಲಿಮ್ ಹಿತರಕ್ಷಣಾ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಡಿ.24ರಂದು ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಜನವರಿ 2ಕ್ಕೆ ಮುಂದೂಡಲಾಗಿದೆ.
ಸದ್ರಿ ದಿನಾಂಕದಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳಿಗೆ ಅನುಮತಿ ನೀಡಿರುವುದರಿಂದ ಪೊಲೀಸ್ ಭದ್ರತೆ ನೀಡಲು ಅನಾನುಕೂಲವಾಗಿದೆ. ಆ ದಿನಾಂಕವನ್ನು ಬಿಟ್ಟು ಜನವರಿ 2ಕ್ಕೆ ಪ್ರತಿಭಟನೆ ನಡೆಸುವುದಾದರೆ ಅನುಮತಿ ಮತ್ತು ಸೂಕ್ತ ಭದ್ರತೆ ನೀಡುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದೆ.
ನಮ್ಮ ಸಮಿತಿಯ ಕೋರ್ ಕಮಿಟಿಯು ಸೇರಿ ಸರ್ವಾನುಮತದ ತೀರ್ಮಾನದಂತೆ ಮುಂದಿನ ದಿನಾಂಕವನ್ನು ನಿಗದಿಪಡಿಸಿ ಜನವರಿ 2ರಂದು ಅಪರಾಹ್ನ 2ಗಂಟೆಗೆ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಸುಳ್ಯ ತಾಲೂಕು ಮುಸ್ಲಿಮ್ ಹಿತರಕ್ಷಣಾ ವೇದಿಕೆಯ ಪ್ರಕಟನೆ ತಿಳಿಸಿದೆ. ಇತರ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಈ ಮೂಲಕ ಕೋರಲಾಗಿದೆ.
Next Story





