ನೋಟ್ರ ಡಾಮ್ನಲ್ಲಿ 2 ಶತಮಾನಗಳಲ್ಲಿ ಮೊದಲ ಬಾರಿಗೆ ಕ್ರಿಸ್ಮಸ್ ಪ್ರಾರ್ಥನೆಯಿಲ್ಲ

file photo
ಪ್ಯಾರಿಸ್, ಡಿ. 23: 1803ರ ಬಳಿಕ ಮೊದಲ ಬಾರಿಗೆ ಪ್ಯಾರಿಸ್ನ ನೋಟ್ರ ಡಾಮ್ ಕತೀಡ್ರಲ್ನಲ್ಲಿ ಈ ಬಾರಿ ಕ್ರಿಸ್ಮಸ್ ಪ್ರಾರ್ಥನಾ ಕೂಟ ನಡೆಯುವುದಿಲ್ಲ.
ಬೆಂಕಿಯಿಂದ ಬೆಂದ 8 ತಿಂಗಳ ಬಳಿಕವೂ ಪ್ಯಾರಿಸ್ನ ಈ ಭವ್ಯ ಸ್ಮಾರಕದ ದುರಸ್ತಿ ಮತ್ತು ಪುನರ್ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ
ಕ್ರಿಸ್ಮಸ್ ಮುನ್ನಾ ದಿನದಂದು ಮಧ್ಯರಾತ್ರಿಯ ಪ್ರಾರ್ಥನೆಯನ್ನು ನಡೆಸಲಾಗುವುದಾದರೂ, ಅದನ್ನು ಸಮೀಪದ ಸೇಂಟ್ ಜರ್ಮೈನ್ ಆಕ್ಸರಾಯಿಸ್ ಚರ್ಚ್ನಲ್ಲಿ ನಿರ್ವಹಿಸಲಾಗುವುದು ಎಂದು ನೋಟ್ರ ಡಾಮ್ನ ಪತ್ರಿಕಾ ಕಚೇರಿ ತಿಳಿಸಿದೆ.
ಸೈನ್ ನದಿಯ ದಂಡೆಯಲ್ಲಿರುವ, ಯುನೆಸ್ಕೊದ ವಿಶ್ವ ಪಾರಂಪರಿಕ ತಾಣವಾಗಿರುವ ನೋಟ್ರ ಡಾಮ್ನಲ್ಲಿ ಎಪ್ರಿಲ್ 15ರಂದು ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯು ಅದರ ಮೇಲ್ಛಾವಣಿ ಮತ್ತು ಹಲವಾರು ಪ್ರಾಚೀನ ಕಲಾಕೃತಿಗಳು ನಾಶವಾಗಿದ್ದವು.
Next Story





