ಕ್ಯೂಬ: 40 ವರ್ಷಗಳ ಬಳಿಕ ಪ್ರಧಾನಿ ನೇಮಕ
ಹವಾನ (ಕ್ಯೂಬ), ಡಿ. 23: ಕ್ಯೂಬದಲ್ಲಿ 40 ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೆ ಮರುಚಾಲನೆ ನೀಡಲಾಗಿದೆ ಹಾಗೂ ಸುದೀರ್ಘ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಮ್ಯಾನುಯೆಲ್ ಮರೇರೊರನ್ನು ನೂತನ ಪ್ರಧಾನಿಯಾಗಿ ನೇಮಿಸಲಾಗಿದೆ.
ನೂತನ ಪ್ರಧಾನಿ ಈಗಾಗಲೇ ಶನಿವಾರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಫಿಡೆಲ್ ಕ್ಯಾಸ್ಟ್ರೊ ಪ್ರಧಾನಿಯಾಗಿದ್ದರು.
56 ವರ್ಷದ ಮರೇರೊರನ್ನು ಸರಕಾರದ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆ ಮತ್ತು ಕ್ರಾಂತಿಕಾರಿ ಹಳಬರಿಂದ ಹೊಸ ತಲೆಮಾರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯ ಭಾಗವಾಗಿದೆ.
Next Story





