ಟೆನಿಸ್‌ಗೆ ಮರಳಲಿರುವ ಕಿಮ್ ಕ್ಲೈಸ್ಟರ್ಸ್
ಬ್ರುಸೆಲ್ಸ್, ಡಿ.23: ಮಾಜಿ ನಂ.1 ಟೆನಿಸ್ ಆಟಗಾರ್ತಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಟೆನಿಸ್‌ಗೆ ಮರಳುವ ನಿರ್ಧಾರ ಕೈಗೊಂಡಿದ್ದಾರೆ. ಆರು ಬಾರಿ ಗ್ರಾನ್ ಸ್ಲಾಮ್ ಜಯಿಸಿರುವ ಕಿಮ್ 2007ರಲ್ಲಿ ಟೆನಿಸ್‌ನಿಂದ ನಿವೃತ್ತರಾಗಿದ್ದರು. ಆಗಸ್ಟ್ 2009 ರಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಟೆನಿಸ್‌ಗೆ ಮರಳಿದ್ದರು. ಅವರು 2011 ರಲ್ಲಿ ಎರಡನೇ ಬಾರಿಗೆ ನಿವೃತ್ತರಾದರು. ಕಿಮ್ ಕ್ಲೈಸ್ಟರ್ಸ್ ಮುಂಬರುವ ಮಾರ್ಚ್ ನಲ್ಲಿ ಮೆಕ್ಸಿಕೊದಲ್ಲಿ ಪುನರಾಗಮನ ಮಾಡುವ ಉದ್ದೇಶವನ್ನು ಪ್ರಕಟಿಸಿದ್ದಾರೆ. 36 ರ ಹರೆಯದ ಕಿಮ್ ಜನವರಿಯಲ್ಲಿ ಆಸ್ಟ್ರೇಲಿಯ ಓಪನ್ ಟೂರ್ನಿಯಲ್ಲಿ ಮರಳಲು ಉದ್ದೇಶಿಸಿದ್ದರು . ಆದರೆ ಮೊಣಕಾಲಿನ ಗಾಯದಿಂದಾಗಿ ತನ್ನ ಯೋಜನೆಯನ್ನು ಮುಂದೂಡಿದ್ದಾರೆ. ತಾನು ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ.್ಲ ಆದರೆ ಇನ್ನೂ ಕೆಲವು ವಾರಗಳ ಬಳಿಕ ಆಡಲು ಸಿದ್ಧನಾಗುತ್ತೇನೆ ಎಂದು ಕಿಮ್ ಸೋಮವಾರ ಹೇಳಿದರು. ಅನುಪಸ್ಥಿತಿಯು ಸಾಕಷ್ಟು ಸಮಯದಿಂದ ಎದ್ದು ಕಾಣುತ್ತಿದೆ. ಆದರೆ ಮೆಕ್ಸಿಕನ್ ಓಪನ್‌ನಲ್ಲಿ ಆಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ನಾಲ್ಕು ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಮತ್ತು ಎರಡು ಬಾರಿ ಡಬಲ್ಸ್ ಗೆದ್ದಿದ್ದಾರೆ. ಮೊದಲ ನಿವೃತ್ತಿಯಿಂದ ಹಿಂದಿರುಗಿದ ನಂತರ ಸತತ ಮೂರು ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದರು.





