Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಿನಲ್ಲಿ ಕಾಣಲಿದೆ ಕಂಕಣ...

ಮಂಗಳೂರಿನಲ್ಲಿ ಕಾಣಲಿದೆ ಕಂಕಣ ಸೂರ್ಯಗ್ರಹಣ !

ಪಾದುವಾ ಮೈದಾನದಲ್ಲಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ

ವಾರ್ತಾಭಾರತಿವಾರ್ತಾಭಾರತಿ24 Dec 2019 1:26 PM IST
share
ಮಂಗಳೂರಿನಲ್ಲಿ ಕಾಣಲಿದೆ ಕಂಕಣ ಸೂರ್ಯಗ್ರಹಣ !

ಮಂಗಳೂರು, ಡಿ.24: ನಮ್ಮ ಜೀವಿತ ಅವಧಿಯಲ್ಲಿ ಮಂಗಳೂರಿನಿಂದ ಪ್ರಥಮವಾಗಿ ಈ ಬಾರಿ ಕಂಕಣ ಸೂರ್ಯಗ್ರಹಣ ಡಿ. 26ರಂದು ಕಾಣಸಿಗಲಿದ್ದು, ನಗರದ ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಸಂಘವು ನಗರದ ಸಂತ ಆ್ಯಗ್ನೆಸ್ ಹಾಗೂ ಪಾದುವ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ನಿವೃತ್ತ ಖಗೋಳಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಯಂತ್, ಅಂದು ಬೆಳಗ್ಗೆ 8 ಗಂಟೆ ನಾಲ್ಕು ನಿಮಿಷದಿಂದ 11 ಗಂಟೆ 3 ನಿಮಿಷದ ನಡುವೆ ನಡೆಯುವ ಈ ನೆರಳು ಬೆಳಕಿನ ಆಟವಾದ ಕಂಕಣ ಸೂರ್ಯಗ್ರಹಣ ವಿಶೇಷ ವಾಗಿದೆ ಎಂದರು.

ನೆರಳು ಬೆಳಕಿನ ಆಟದ ನಡುವೆ 9 ಗಂಟೆ 25 ನಿಮಿಷದ ಆಸುಪಾಸಿನಲ್ಲಿ ಕೇವಲ 2 ನಿಮಿಷ 11 ಸೆಕೆಂಡುಗಳ ಕಾಲ ಸೂರ್ಯ ಕಂಕಣ ಆಕಾರದಲ್ಲಿ ಗೋಚರಿಸಲಿದೆ. ಕದ್ರಿ ಗುಡ್ಡೆಯಲ್ಲಿರುವ ಪಾದುವ ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ಮೂರು ದೂರದರ್ಶಕಗಳ ಮೂಲಕ ಕಂಕಣ ಸೂರ್ಯಗ್ರಹಣವನ್ನು ಆಸಕ್ತ ಸಾರ್ವಜನಿಕರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಿದ್ಯಮಾನವನ್ನು ವೀಕ್ಷಿಸಲು ಸೌರ ಕನ್ನಡಕಗಳನ್ನು ಕೂಡಾ ಒದಗಿಸಲಾಗುವುದು ಎಂದು ಅವರು ಹೇಳಿದರು.

ಖ್ಯಾತ ವಿಜ್ಞಾನಿ ಡಾ. ಪ್ರಜ್ವಲ್ ಶಾಸ್ತ್ರಿ ಉಪಸ್ಥಿತರಿದ್ದು, ವಿಶೇಷ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಲಿದ್ದಾರೆ. ಮಾತ್ರವಲ್ಲದೆ ತರಬೇತಿ ಪಡೆದ ಸಂತ ಆ್ಯಗ್ನೆಸ್ ಕಾಲೇಜು, ಪಾದುವ ಸಂಸ್ಥೆ ಮತ್ತು ಸರಕಾರಿ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸಹಕಾರವನ್ನು ನೀಡಲಿದ್ದಾರೆ ಎಂದವರು ಹೇಳಿದರು.

ಸೂರ್ಯಗ್ರಹಣ ವೀಕ್ಷಿಸಲು ಬಯಸುವವರು, ಸೂರ್ಯಗ್ರಹಣ ವೀಕ್ಷಣೆಯ ಕನ್ನಡಕ ಬಯಸುವವರು ಸ್ಟಾನಿ ತಾವ್ರೊ (9480346642) ಅಥವಾ ಡಾ. ಸಂಗೀತ ಲಕ್ಷ್ಮಿ (9448790070)ನ್ನು ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ಸ್ಟಾನಿ ತಾವ್ರೊ, ರೋಹಿತ್ ರಾವ್, ಅಂಜನಾ ಕಾಮತ್ ಉಪಸ್ಥಿತರಿದ್ದರು.

ಬರೀ ಗಣ್ಣಿನಲ್ಲಿ ವೀಕ್ಷಿಸದಿರಿ

ಗ್ರಹಣದ ಬಗ್ಗೆ ತಪ್ಪು ಗ್ರಹಿಕೆಗಳನ್ನು ದೂರ ಮಾಡಬೇಕಾಗಿದೆ. ಜತೆಯಲ್ಲಿ ಸೂರ್ಯ ಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸುವುದರಿಂದ ಕಣ್ಣುಗಳಿಗೆ ಅಪಾಯವಾಗುವುದು ಖಂಡಿತ ಹಾಗಾಗಿ ವೀಕ್ಷಣೆಗೆ ಕುತೂಹಲ್ ವಿಜ್ಞಾನ ಚಟುವಟಿಕೆಗಳ ಕಂಪನಿಯು ಕನ್ನಡಕವನ್ನು ಪೂರೈಸುತ್ತಿದೆ. ಪರಿಸರ ಸಂರಕ್ಷಣೆಯ ಅಭಿಯಾನವನ್ನೂ ಕಂಪನಿ ಹಮ್ಮಿಕೊಂಡಿದ್ದು, 50 ರೂ.ನಲ್ಲಿ ಈ ಕನ್ನಡಕದ ಕಿಟ್‌ನ ಜತೆ ಮಾಹಿತಿ ಕೈಪಿಡಿ ಹಾಗೂ ಬೀಜಗಳು ಸಹ ಇರಲಿವೆ. ಈ ಕನ್ನಡಕಗಳ ಸೋಲಾರ್ ಫಿಲ್ಟರ್‌ಗಳನ್ನು ಅಮೆರಿಕಾದ ತೌಸಂಡ್ ಓಕ್ಸ್ ಎಂಬ ಸಂಸ್ಥೆ ತಯಾರಿಸಿದ್ದು, ನಾಸಾದ ಕಾರ್ಯಕ್ರಮಗಳಲ್ಲಿ ಬಳಕೆಯಲ್ಲಿದೆ ಮತ್ತು ಇದು ಬೆಳಕುವ ಪ್ರವಹಿಸುವ ಅವಶ್ಯಕತೆಗಳಿಗೆ ಅನುಗುಣವಾಗಿವೆ. ಯಾವುದೇ ಕಾರಣಕ್ಕೂ ಸೂರ್ಯಗ್ರಹಣವನ್ನು ಬರಿ ಗಣ್ಣಿನಿಂದ ನೋಡುವ ಪ್ರಯತ್ನವನ್ನು ಮಾಡಬಾರದು. ಮಾತ್ರವಲ್ಲದೆ, ಎಕ್ಸ್‌ರೇ, ಫಿಲ್ಮ್‌ಶೀಟ್ ಅಥವಾ ಹಳೆಯ ಕನ್ನಡಕಗಳನ್ನು ಉಪಯೋಗಿಸಿ ನೋಡುವುದು ಕೂಡಾ ಕಣ್ಣಿಗೆ ಅಪಾಯಕಾರಿ ಎಂದು ಖಗೋಳ ಶಾಸ್ತ್ರ ಪ್ರಾಧ್ಯಾಪಕಿ ಡಾ. ಸಂಗೀತಲಕ್ಷ್ಮಿ ಮಾಹಿತಿ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X