ಶಾರ್ಟ್ ಸರ್ಕ್ಯೂಟ್‍ನಿಂದ ಸೆಲೂನ್ ಗೆ ಬೆಂಕಿ : ಓರ್ವನಿಗೆ ಗಾಯ

ಬಂಟ್ವಾಳ, ಡಿ. 24: ಶಾರ್ಟ್ ಸರ್ಕ್ಯೂಟ್‍ನಿಂದ ಸೆಲೂನ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ವಿಟ್ಲ ಪೇಟೆಯಲ್ಲಿ ಮಂಗಳವಾರ ಸಂಭವಿಸಿದ್ದು, ಘಟನೆಯಿಂದ ಓರ್ವ ಗಾಯಗೊಂಡಿದ್ದಾರೆ.
ವಿಟ್ಲ ಖಾಸಗಿ ಬಸ್‍ನಿಲ್ದಾಣದ ಬಳಿ ಇರುವ ಸೆಲೂನ್‍ಗೆ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ತಗಲಿದ್ದು, ಸೆಲೂನ್‍ನಲ್ಲಿದ್ದ ಅಪಾರ ಸೊತ್ತುಗಳು ಬೆಂಕಿಗಾಹುತಿಯಾಗಿದ್ದು, ನಷ್ಟವುಂಟಾಗಿದೆ. ಸೆಲೂನ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವನಿಗೆ ಬೆಂಕಿ ತಗಲಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
Next Story





