ಎನ್ ಪಿಆರ್ ಗೆ ಯಾವುದೇ ದಾಖಲೆಗಳು ಬೇಕಾಗಿಲ್ಲ: ಕೇಂದ್ರ ಸಚಿವ ಜಾವಡೇಕರ್
ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಅಥವಾ ಎನ್ ಪಿಆರ್ ಗೆ ಯಾವುದೇ ದಾಖಲೆಗಳು ಅಥವಾ ಬಯೋಮೆಟ್ರಿಕ್ ಗಳು ಬೇಕಾಗಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
2010ರಲ್ಲಿ ಯುಪಿಎ ಸರಕಾರ ನಡೆಸಿದ್ದ ಗಣತಿಗೂ ಎನ್ ಪಿಆರ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದವರು ಹೇಳಿದರು. 2020ರ ಎಪ್ರಿಲ್ ನಿಂದ ಸೆಪ್ಟಂಬರ್ 2020ರವರೆಗೆ ಎನ್ ಪಿಆರ್ ಅಪ್ ಡೇಟ್ ನಡೆಯಲಿದೆ. 2021ರ ಫೆಬ್ರವರಿಯಲ್ಲಿ ಜನಗಣತಿ ನಡೆಯಲಿದೆ.
ಎನ್ ಪಿಆರ್ ನಡೆಸುವುದಾಗಿ ಎಲ್ಲಾ ರಾಜ್ಯಗಳು ಒಪ್ಪಿಕೊಂಡಿದೆ ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಈ ಸಂದರ್ಭ ಮಾಹಿತಿ ನೀಡಿದರು.
Next Story