ಡಿ.25 : ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಯಡಿಯೂರಪ್ಪ
ಉಡುಪಿ, ಡಿ. 24:ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿ.25ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.25ರಂದು ಅಪರಾಹ್ನ 2:15ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು 2:30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ವತಿಯಿಂದ ಅಯೋಜಿಸಿರುವ ಚಿಣ್ಣರ ಮಾಸದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸುವರಲ್ಲದೇ, ಸ್ವಚ್ಛ ಬಾರತ ಅಭಿಯಾನದಡಿ ನಿರ್ಮಿಸಿರುವ ಸುಸಜ್ಜಿತ ಶೌಚಾಲಯ ಸಮುಚ್ಚಯದ ಉದ್ಘಾಟನೆ ನೆರವೇರಿಸುವರು.
ಬಳಿಕ 3:20ಕ್ಕೆ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುತ್ಯಾರು ಯಾಗ ಸಂಘಟನಾ ಸಮಿತಿ ವತಿಯಿಂದ ಆಯೋಜಿಸಿರುವ ಲೋಕ ಸಹಸ್ರನಾಮ ನವಕುಂಡ ಗಣಪತಿ ಪೂಜೆಯಲ್ಲಿ ಭಾಗವಹಿಸುವರು.ಸಂಜೆ 4:50ಕ್ಕೆ ಕಾಪು ತಾಲೂಕಿನ ಪೊಲಿಪುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಜ್ರ ಮಹೋತ್ಸವ ಹಾಗೂ ಕಾಲೇಜು ವಿಭಾಗದ ಸ್ವರ್ಣ ಮಹೋತ್ಸವ ಉದ್ಘಾಟನೆಯಲ್ಲಿ ಭಾಗವಹಿಸಿ ಬಳಿಕ ಮಂಗಳೂರಿಗೆ ತೆರಳುವರು.





