ಬಸ್‍ಗಳ ಬ್ಯಾಟರಿ ಕಳವು ಪ್ರಕರಣ : ಆರೋಪಿ ಸೆರೆ
ಬಂಟ್ವಾಳ, ಡಿ. 24: ಬಸ್‍ಗಳ ಬ್ಯಾಟರಿ ಕಳವು ಆರೋಪದಡಿ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರ ಬಿ.ಸಿ.ರೋಡಿಗೆ ಸಮೀಪದ ಕೈಕಂಬದಲ್ಲಿ ಬಂಧಿಸಿದ್ದಾರೆ.
ಕಡಬ ತಾಲೂಕಿನ ಕಂತೂರು ಗ್ರಾಮದ ಏರ್ಮಾಲ ನಿವಾಸಿ ರಾಝಿಕ್ (24) ಬಂಧಿತ ಆರೋಪಿ.
ಸುಮಾರು 25 ಸಾವಿರ ರೂ. ಮೌಲ್ಯದ ಬ್ಯಾಟರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಬೇರೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





