ಬಾಕ್ಸಿಂಗ್ ಡೇ ಟೆಸ್ಟ್ ಗೆ ವಾರ್ನರ್ ಆಸ್ಟ್ರೇಲಿಯಾ ತಂಡ ಸೇವೆಗೆ ಲಭ್ಯ
ಮೆಲ್ಬೋರ್ನ್, ಡಿ.24: ನ್ಯೂಝಿಲ್ಯಾಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ಗೆ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡದ ಸೇವೆಗೆ ಲಭ್ಯರಿರುವುದಾಗಿ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಎಂಸಿಜಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರು ಗಾಯಗೊಂಡು ಹೊರ ನಡೆದ್ದಿರು. ಆದರೆ ನಂತರ ಅವಧಿಯಲ್ಲಿ ಬ್ಯಾಟಿಂಗ್ಗೆ ಮರಳಿದ್ದರು. ಅವರು ಸಂಪೂರ್ಣವಾಗಿ ಚೇತರಿಸಿಕೊಲ್ಲದಿದ್ದರೂ ಮಂಗಳವಾರ ಬ್ಯಾಟಿಂಗ್ ಮಾಡಿದರು.
ಗಾಯಗೊಂಡ ಜೋಶ್ ಹೇಝಲ್ವುಡ್ ಸ್ಥಾನಕ್ಕೆ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಲ್ಯಾಂಗರ್ ಹೇಳಿದ್ದಾರೆ. ಆದಾಗ್ಯೂ ,ಆಸ್ಟ್ರೇಲಿಯಾ ತನ್ನ ಆಡುವ ಅಂತಿಮ ಇಲೆವೆನ್ ತಂಡವನ್ನು ಪ್ರಕಟಿಸಿಲ್ಲ.
ಆಸ್ಟ್ರೇಲಿಯಾದ ವಾರ್ನರ್ ಉತ್ತಮ ಫಾರ್ಮ್ನಲ್ಲ್ಲಿದ್ದಾರೆ. ನೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್ಗಳಲ್ಲಿ 43 ಮತ್ತು 19 ರನ್ ಗಳಿಸಿದ್ದರು. ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ 154 ಮತ್ತು ಔಟಾಗದೆ 335 ರನ್ ಗಳಿಸಿದ್ದರು. ನ್ಯೂಝಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.