ಯಮುನಾ ಎಕ್ಸ್ಪ್ರೆಸ್ ವೇ ಹಗರಣದ ಸಿಬಿಐ ತನಿಖೆ : ಮಾಜಿ ಸಿಇಒ, 20 ಇತರರ ವಿರುದ್ಧ ಎಫ್ ಐಆರ್
ಹೊಸದಿಲ್ಲಿ, ಡಿ.25: ಯಮುನಾ ಎಕ್ಸ್ಪ್ರೆಸ್ವೇ ಯೋಜನೆಗಾಗಿ ಮಥುರಾದಲ್ಲಿ ಜಮೀನು ಖರೀದಿಯಲ್ಲಿ 126 ಕೋಟಿ ರೂ.ಗಳ ಮೌಲ್ಯದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ.
ಯೋಜನೆಯ ಮಾಜಿ ಸಿಇಒ ಪಿ.ಸಿ ಗುಪ್ತಾ ಮತ್ತು ಇತರ 20 ಮಂದಿಯನ್ನು ತನ್ನ ಎಫ್ಐಆರ್ನಲ್ಲಿ ಹೆಸರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಯಮುನಾ ಎಕ್ಸ್ಪ್ರೆಸ್ ವೇ ಯೋಜನೆಗಾಗಿ ಮಥುರಾದಲ್ಲಿ ಹೆಚ್ಚಿನ ಪ್ರದೇಶಗಳನ್ನು ಖರೀದಿಸಿದ 126 ಕೋಟಿ ರೂ.ಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಶಿಫಾರಸ್ಸಿನ ಮೇರೆಗೆ ಸಿಬಿಐ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ಯಮುನಾ ಎಕ್ಸ್ಪ್ರೆಸ್ವೇಯ ಭೂಮಿಯನ್ನು ಅಂದಿನ ಯಮುನಾ ಎಕ್ಸ್ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರವು 85 ಕೋಟಿ ರೂ.ಗೆ ಮಥುರಾದ 7 ಗ್ರಾಮಗಳಲ್ಲಿ ಜಮೀನು ಖರೀದಿಸಿದೆ ಎಂದು ರಾಜ್ಯ ಸರಕಾರ ಆರೋಪಿಸಿದೆ, ಇದರಿಂದಾಗಿ ರಾಜ್ಯ ಸರ್ಕಾರಕ್ಕೆ 126 ಕೋಟಿ ರೂ. ನಷ್ಟ ಸಂಭವಿಸಿದೆ ಎಂದುಅಧಿಕೃತ ಮೂಲಗಳು ತಿಳಿಸಿವೆ.
Next Story