ಉ. ಪ್ರದೇಶ: ಪ್ರತಿಭಟನೆ ವೇಳೆ ಅಂಗಡಿಗಳಲ್ಲಿ ದಾಂಧಲೆಗೈದು, ವಾಹನ ಪುಡಿಗಟ್ಟಿದ ಪೊಲೀಸರು
ವಿಡಿಯೋ ವೈರಲ್
ಲಕ್ನೋ: ಕಾನ್ಪುರ ಸಮೀಪ ಹಿಂಸಾಪೀಡಿತ ಪ್ರದೇಶದಲ್ಲಿ ಪೊಲೀಸರು ಅಂಗಡಿಗಳಲ್ಲಿ ದಾಂಧಲೆಗೈಯ್ಯುತ್ತಿರುವ ಹಾಗೂ ಕಾರುಗಳನ್ನು ಹಾನಿಗೊಳಿಸುತ್ತಿರುವ ವೀಡಿಯೋ ಹೊರಬಿದ್ದಿದೆ.
ಮನೆಯೊಂದರ ಟೆರೇಸಿನಿಂದ ಡಿಸೆಂಬರ್ 21ರಂದು ಚಿತ್ರೀಕರಿಸಲಾದ ವೀಡಿಯೋವೊಂದರಲ್ಲಿ ಬೇಗಂಗಂಜ್ ಪ್ರದೇಶದಲ್ಲಿ ಹಿಂಸೆ ಕಡಿಮೆಯಾದ ನಂತರ ಸುಮಾರು ನೂರರಷ್ಟಿದ್ದ ಪೊಲೀಸರು ಅಂಗಡಿಗಳ ಶಟರ್ ಮುರಿಯುತ್ತಿರುವುದು ಹಾಗೂ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಗೈಯ್ಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಪೊಲೀಸರು ಶಟರುಗಳನ್ನು ಒಡೆಯುವ ಸದ್ದು ವೀಡಿಯೋದಲ್ಲಿ ಜೋರಾಗಿ ಕೇಳಿಸುತ್ತದೆಯೆಂದು ಸ್ಥಳೀಯರು ಹೇಳುತ್ತಾರೆ.
ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದ್ದಕ್ಕೆ ರಾಮಪುರ್ನ 28 ಮಂದಿಗೆ ಉತ್ತರ ಪ್ರದೇಶ ಸರಕಾರ ನೋಟಿಸ್ ಜಾರಿಗೊಳಿಸಿದ ನಂತರ ಈ ವೀಡಿಯೋ ಹೊರಬಿದ್ದಿದೆ. ನೋಟಿಸ್ ಜಾರಿಗೊಳಿಸಲಾದ ವ್ಯಕ್ತಿಗಳಿಗೆ ಒಟ್ಟು ರೂ 14.96 ಲಕ್ಷ ತೆತ್ತು ನಷ್ಟ ಭರಿಸುವಂತೆ ಸೂಚಿಸಲಾಗಿದೆ. ಆದರೆ ಪೊಲೀಸರೂ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದ್ದಾರೆಂದು ಜನರು ಆರೋಪಿಸುತ್ತಿದ್ದಾರೆ.
Hi @kanpurnagarpol , i have many many videos of your alleged high handedness in the 'crack down' over the violence in the city over CAA, but this clip I have confirmed as 100 percent authentic so putting it out . it shows your men vandalising shops and cars .... pic.twitter.com/daaKFBFwYO
— Alok Pandey (@alok_pandey) December 25, 2019