ಮನೆಗೆ ನುಗ್ಗಿ ನಗ ನಗದು ಕಳವು
ಕಾರ್ಕಳ, ಡಿ.25: ಕಲ್ಲೊಟ್ಟೆ ರಸ್ತೆ ನಾಗಕಟ್ಟೆಯ ಬಳಿಯ ಮನೆಯೊಂದಕ್ಕೆ ಡಿ.24ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 3ಗಂಟೆ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಸೂರ್ಯ ಪ್ರಕಾಶ್ ರಾವ್ ಎಂಬವರ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿರಿಸಿದ್ದ ಪೆಂಡೆಟ್ ಇರುವ ಚಿನ್ನದ ಚೈನ್, ಮುತ್ತಿನ ಹಾರ, ಚಿನ್ನದ ಗುಂಡು ಸರ, 4 ಚಿನ್ನದ ಬಳೆಗಳು, 3 ಜೊತೆ ಚಿನ್ನದ ಕಿವಿಯ ಬೆಂಡೋಲೆ, 3 ಚಿನ್ನದ ಕಿವಿಯ ರಿಂಗ್, 2 ಬೆಳ್ಳಿಯ ಕಾಲು ಚೈನ್, 25ಸಾವಿರ ರೂ. ನಗದನ್ನು ಕಳವು ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ 4,12,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story