ಕಾರ್ಕಳ : ಬಸ್ ಢಿಕ್ಕಿ ; ದ್ವಿಚಕ್ರ ವಾಹನ ಸಹ ಸವಾರ ಮೃತ್ಯು

ಕಾರ್ಕಳ : ಬಸ್ಸೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಸಹ ಸವಾರರೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ವೇಳೆ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಾಂತಾವರ ಗ್ರಾಮದ ಪರಪ್ಪಾಡಿಯ ಸದಾನಂದ ಮೂಲ್ಯ ಎಂದು ಗುರುತಿಸಲಾಗಿದೆ. ಸವಾರ ಜೇಮ್ಸ್ ಕಾರ್ಡೊಜಾ ಎಂಬವರು ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಕಳ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೆಳ್ಮಣ್ ಕಡೆಗೆ ಹೋಗುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ. ತಲೆ ಹಾಗೂ ಕಾಲಿಗೆ ತೀವ್ರಸ್ವರೂಪದ ಗಾಯಗೊಂಡ ಸಹಸವಾರ ಸದಾನಂದ ಮೂಲ್ಯ ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





