ಸೂರ್ಯಗ್ರಹಣ: ಉಡುಪಿಯ ಮಸೀದಿಗಳಲ್ಲಿ ವಿಶೇಷ ನಮಾಝ್

ಉಡುಪಿ, ಡಿ.26: ಖಗೋಳ ಕೌತುಕ, ಈ ದಶಕದ ಕೊನೆಯ ಸೂರ್ಯಗ್ರಹಣ ಇಂದು ಬೆಳಗ್ಗೆ ಸಂಭವಿಸಿದೆ. ಈ ಸಂದರ್ಭ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಸೂರ್ಯಗ್ರಹಣದ ವಿಶೇಷ ನಮಾಝ್ ನಿರ್ವಹಿಸಲಾಯಿತು.
ಉಡುಪಿಯ ಜಾಮಿಯ ಮಸೀದಿ, ಅಂಜುಮಾನ್ ಮಸೀದಿ, ಮೂಳೂರು ಜುಮಾ ಮಸೀದಿ, ಕಾಪು ಪೊಲಿಪು ಮಸೀದಿ, ಗಂಗೊಳ್ಳಿ ಜುಮಾ ಮಸೀದಿ, ಮುಹಿಯುದ್ದೀನ್ ಜುಮಾ ಮಸೀದಿ ಸೇರಿದಂತೆ ಹಲವೆಡೆ ನಮಾರ್ಝ್ ನಿರ್ವಹಿಸಲಾಯಿತು.
ಗಂಗೊಳ್ಳಿ ಜುಮಾ ಮಸೀದಿಯಲ್ಲಿ ಖತೀಬ್ ಮೌಲಾನಾ ಮುಝಮ್ಮಿಲ್ ಸಾಹೇಬ್ ನದ್ವಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ರಸ್ತೆ ಬಿಕೋ ಎನ್ನುತ್ತಿದ್ದು, ಜನ, ವಾಹನ ಸಂಚಾರ ವಿರಳವಾಗಿತ್ತು.
Next Story





