ಉಪ್ಪಿನಂಗಡಿ: ಮಸೀದಿಯಲ್ಲಿ ಸೂರ್ಯಗ್ರಹಣ ನಮಾಝ್

ಉಪ್ಪಿನಂಗಡಿ, ಡಿ.26: ಇಲ್ಲಿನ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯಲ್ಲಿ ಸೂರ್ಯಗ್ರಹಣ ನಮಾಝ್ ಮತ್ತು ವಿಶೇಷ ಸಾಮೂಹಿಕ ಪ್ರಾರ್ಥನೆ ಖತೀಬ್ ನಝೀರ್ ಅಝ್ಹರಿ ಬೊಳ್ಮಿನಾರ್ ನೇತ್ರತ್ವದಲ್ಲಿ ನಡೆಯಿತು.
ನಮಾಝಿನ ನಂತರ ಖುತ್ಬಾ ನಡೆಯಿತು. ಜಮಾಅತ್ ಕಾರ್ಯದರ್ಶಿ ಶುಕೂರ್ ಹಾಜಿ, ಉಪಾಧ್ಯಕ್ಷರಾದ ಅಶ್ರಫ್ ಹಾಜಿ, ಹಾರೂನ್ ಹಾಜಿ, ಕೋಶಾಧಿಕಾರಿ ಮುಸ್ತಫ, ಸದಸ್ಯರಾದ ರವೂಫ್, ಎಚ್.ಯೂಸುಫ್ ಹಾಜಿ ಇತರ ಸದಸ್ಯರು ಮತ್ತು ಜಮಾಅತರು ಉಪಸ್ಥಿತರಿದ್ದರು.
Next Story







