ಮಂಗಳೂರು ಗೋಲಿಬಾರಿಗೆ ಬಲಿಯಾದವರ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ಘೋಷಿಸಿದ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಗೋಲಿಬಾರಿನಲ್ಲಿ ಮೃತರಾದ ಇಬ್ಬರ ಕುಟುಂಬಗಳಿಗೆ ಕರ್ನಾಟಕ ಸರಕಾರ ಈ ಹಿಂದೆ ಘೋಷಿಸಿದ್ದ ತಲಾ ರೂ. 10 ಲಕ್ಷ ಪರಿಹಾರವನ್ನು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಡೆ ಹಿಡಿದ ಬೆನ್ನಿಗೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೃತ ಜಲೀಲ್ ಹಾಗೂ ನೌಶೀನ್ ಅವರ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕೊಲ್ಕತ್ತಾದಲ್ಲಿ ಇಂದು ನಡೆದ ಸಿಎಎ-ಎನ್‍ಆರ್ ಸಿ ವಿರೋಧಿ ರ್ಯಾಲಿಯಲ್ಲಿ ಮಮತಾ ಈ ಕುರಿತು ಘೋಷಣೆ ಮಾಡಿದ್ದಾರೆ.
"ಮಂಗಳೂರಿನಲ್ಲಿ ಪ್ರತಿಭಟನೆಗಳ ವೇಳೆ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ. 5 ಲಕ್ಷಗಳ ಚೆಕ್ ನಾವು ನೀಡುತ್ತೇವೆ,'' ಎಂದು ರ್ಯಾಲಿಯಲ್ಲಿ ಮಮತಾ ಹೇಳಿದರು.
ಸರಕಾರ ಸಿಎಎ ಹಾಗೂ ಎನ್‍ಆರ್ ಸಿ ವಾಪಸ್ ಪಡೆಯುವ ತನಕ ಪ್ರತಿಭಟನೆ ಮುಂದುವರಿಯುವುದು ಎಂದು ಮಮತಾ ಹೇಳಿದರು.
Next Story





