ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಹಮ್ಮದ್ ನಲಪಾಡ್ ನೆರವು

ಮಂಗಳೂರು, ಡಿ. 26: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಗೋಲಿಬಾರ್ ನಲ್ಲಿ ಮೃತರಾದ ನೌಶಿನ್ ಮತ್ತು ಅಬ್ದುಲ್ ಜಲೀಲ್ ಅವರ ಕುಟುಂಬಗಳಿಗೆ ಬೆಂಗಳೂರು ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮುಹಮ್ಮದ್ ಹ್ಯಾರಿಸ್ ನಲಪಾಡ್ ತಲಾ 50 ಸಾವಿರ ರೂ. ನೆರವು ನೀಡಿದರು.
ಮುಹಮ್ಮದ್ ನಲಪಾಡ್ ಅವರು ಇಂದು ಮೃತರ ಕುಟುಂಬ ಸದಸ್ಯರನ್ನು ಭೇಟಿಯಾಗಿ, ಸಾಂತ್ವನ ಹೇಳಿದರು. ಈ ಸಂದರ್ಭ ಕಾರ್ಪೊರೇಟರ್ ಲತೀಫ್ ಕಂದಕ್, ಸಿಎಂ ಮುಸ್ತಫಾ, ನಫೀ ಮುಹಮ್ಮದ್, ಸಿಎಚ್ ಜವಾಝ್ ಹಾಗು ಇತರರು ಉಪಸ್ಥಿತರಿದ್ದರು.
Next Story







