ಭಟ್ಕಳ; ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದಿಂದ ಪ್ರತಿಭಟನಾ ಸಭೆ

ಭಟ್ಕಳ : ಇಲ್ಲಿನ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಹಾಗೂ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ವತಿಯಿಂದ ಭಟ್ಕಳದ ನವಾಯತ್ ಕಾಲನಿಯ ರಾಬಿತಾ ಸೊಸೈಟಿಯ ಸಭಾಂಗಣದಲ್ಲಿ ಪೌರತ್ವ ತಿದ್ದುಪಡೆ ಕಾಯ್ದೆ ಹಾಗೂ ಎನ್.ಆರ್.ಸಿ ಯನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನಾ ಸಮಾವೇಶ ನಡೆಸಿದರು.
ಸಮಾವೇಶವನ್ನುದ್ದೇಶಿಸಿ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಮೌಲಾನ ಇಕ್ಬಾಲ್ ನಾಯತೆ ನದ್ವಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ ಹಾಗೂ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ನಬಿರಾ ಮೊಹತೆಶಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಭಟ್ಕಳ ಘಟಕದ ಅಧ್ಯಕ್ಷತೆ ಸಾಜಿದಾ ಅಂಜುಮ್, ಜಿ.ಐ.ಒ ಅಧ್ಯಕ್ಷ ಆಯಿಶಾ ತಖ್ದೀಸ್ ಮತ್ತಿತರರು ಉಪಸ್ಥಿತರಿದ್ದು.
Next Story









