ಎಚ್‌ಡಿಕೆ ಆಡಳಿತದ ಸಾಧನೆ ಕದ್ದ ‘ಅನರ್ಹ ಸರಕಾರ’: ಜೆಡಿಎಸ್ ಟೀಕೆ

ಬೆಂಗಳೂರು, ಡಿ.26: ನಾಚಿಕೆ, ಮಾನ ಮರ್ಯಾದೆ ಇಲ್ಲದ ‘ಅನರ್ಹ ಸರಕಾರ’ವು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ. ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮತ್ತೊಬ್ಬರ ಸಾಧನೆಗಳನ್ನು ಕದಿಯುವುದು ಕಷ್ಟದ ಕೆಲಸವೇ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
Next Story





